ಔಷಧೀಯ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು (Coconut Oil) ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಂದಿದೆ. ಎಲ್ಲಾ ನೈಸರ್ಗಿಕ ತೈಲಗಳ ಪೈಕಿ, ತೆಂಗಿನ ಎಣ್ಣೆಯು (Coconut Oil) ವಿವಿಧ ಪ್ರಯೋಜನಗಳೊಂದಿಗೆ ಗಮನಾರ್ಹವಾದ ಆರೋಗ್ಯ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಆಯುರ್ವೇದ (Ayurveda) ಪದ್ಧತಿಗಳಲ್ಲಿ ತೆಂಗಿನ ಎಣ್ಣೆಯ ಬಳಕೆಯನ್ನು ಒತ್ತಿಹೇಳಲಾಗುತ್ತದೆ. ಹಾಗೆಯೇ ಆಯುರ್ವೇದ ಗ್ರಂಥಗಳು ತೆಂಗಿನ ಮರವನ್ನು “ಕಲ್ಪ ವೃಕ್ಷ” ಎಂದು ಉಲ್ಲೇಖಿಸುತ್ತದೆ. ಅಂದರೆ “ಬದುಕಲು ಬೇಕಾದ ಎಲ್ಲವನ್ನೂ ಪೂರೈಸುವ ಮರ” ಎಂದರ್ಥ.
ಪ್ರತಿದಿನ ಒಂದು ಚಮಚ Coconut Oil ಸೇವಿಸುವುದರ ಪ್ರಯೋಜನಗಳು
- ಮನಸ್ಸನ್ನು ಆಹ್ಲಾದಕರವಾಗಿಸುತ್ತದೆ: ತೆಂಗಿನ ಎಣ್ಣೆಯನ್ನು ಸೇವಿಸುವ ಜನರು ಹೆಚ್ಚು ವಿಶ್ರಾಂತಿ ಭಾವವನ್ನು ಅನುಭವಿಸುತ್ತಾರೆ. ಹಾಗೆಯೇ ಅವರು ಕಡಿಮೆ ಆತಂಕವನ್ನು ಅನುಭವಿಸುತ್ತಾರೆ! ಏಕೆಂದರೆ ಇದು ನರವೈಜ್ಞಾನಿಕ ಪ್ರಯೋಜನಗಳನ್ನು ಹೊಂದಿದೆ.
- ಶಕ್ತಿ ವರ್ಧಕ: ಇತರ ಕೊಬ್ಬುಗಳಿಗೆ ಸಂಬಂಧಿಸಿದ ಭಾರವಾದ ಭಾವನೆ ಇಲ್ಲದೆ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ತೆಂಗಿನ ಎಣ್ಣೆ ಸಹಕಾರಿಯಾಗಿದೆ. ಬೆಳಗ್ಗೆ ಎದ್ದು ತೆಂಗಿನ ಎಣ್ಣೆಯನ್ನು ಸೇವಿಸಿದಾಗ ಅದು ದಿನವಿಡೀ ಉತ್ತಮ, ನಿರಂತರ ಶಕ್ತಿಯನ್ನು ನೀಡುತ್ತದೆ ಎಂಬುದಾಗಿ ಅನೇಕರು ಹೇಳುತ್ತಾರೆ.
- ಹಾರ್ಮೋನುಗಳ ಸಮತೋಲನ: ಶಕ್ತಿಯನ್ನು ಉತ್ತೇಜಿಸುವುದರ ಜೊತೆಗೆ, ತೆಂಗಿನ ಎಣ್ಣೆಯು ಥೈರಾಯ್ಡ್ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭ ಮತ್ತು ತ್ವರಿತವಾಗಿ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ತೆಂಗಿನ ಎಣ್ಣೆಯು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಕೊಬ್ಬಿನ ಚಯಾಪಚಯವನ್ನು ಸುಧಾರಿಸುವಲ್ಲಿಯೂ ಸಹಾಯ ಮಾಡಬಹುದು.
- ಚರ್ಮವನ್ನು ತೇವಗೊಳಿಸುತ್ತದೆ: ತೆಂಗಿನ ಎಣ್ಣೆಯು ಉತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಆರ್ಧ್ರಕಗೊಳಿಸಲು ಸಹಕಾರಿಯಾಗಿದೆ. ಇದು ಶುಷ್ಕ, ಹಾನಿಗೊಳಗಾದ ಚರ್ಮದಿಂದ ಪರಿಹಾರವನ್ನು ನೀಡುತ್ತದೆ.
- ಅನಾರೋಗ್ಯವನ್ನು ತಡೆಯುತ್ತದೆ: ತೆಂಗಿನ ಎಣ್ಣೆಯು ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ.
- ಇದರೊಂದಿಗೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸುವ ಆಯಿಲ್ ಪುಲ್ಲಿಂಗ್‌ಗೆ ಇದು ಪ್ರಯೋಜನಕಾರಿ ಎಂದು ಗುರುತಿಸಲಾಗಿದೆ. ಬಾಯಿಯ ಆರೋಗ್ಯವು ನಮ್ಮ ಪ್ರತಿರಕ್ಷಣಾ ಪ್ರತಿಕ್ರಿಯೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ.
ಒಟ್ಟಾರೆಯಾಗಿ ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಒಟ್ಟಾರೆ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.