
ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳೆಲ್ಲರಿಗೂ ಗೊತ್ತು. ಆದರೆ ಬಾಳೆ ಹೂ ಕೂಡ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಇದರಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ಕಬ್ಬಿಣ ಇದೆ. ಈ ಪೋಷಕಾಂಶಗಳಿಂದ ದೇಹ ಬಲವಾಗುತ್ತದೆ, ಹಲವಾರು ಕಾಯಿಲೆಗಳಿಂದ ದೂರವಾಗಬಹುದು. ಭಾರತದಲ್ಲಿ ಇದನ್ನು ಅಡುಗೆಗಳಲ್ಲಿ ಬಳಸುತ್ತಾರೆ ಮತ್ತು ಆಯುರ್ವೇದದಲ್ಲೂ ಔಷಧಿಯಾಗಿ ಉಪಯೋಗಿಸುತ್ತಾರೆ.
ಮಧುಮೇಹ ನಿಯಂತ್ರಣಕ್ಕೆ ಸಹಾಯಕ: ಟೈಪ್ 2 ಮಧುಮೇಹ ರೋಗಿಗಳಿಗೆ ಬಾಳೆ ಹೂ ಒಂದು ಉತ್ತಮ ಆಯ್ಕೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಇರುವವರು ಇದನ್ನು ನಿಯಮಿತವಾಗಿ ತಿನ್ನುವುದು ಉತ್ತಮ.
ಒತ್ತಡ ಮತ್ತು ಖಿನ್ನತೆಯಿಂದ ಮುಕ್ತಿ: ಬಾಳೆ ಹೂದಲ್ಲಿ ಮೆಗ್ನೀಸಿಯಂ ಮತ್ತು ಆಂಟಿ-ಆಕ್ಸಿಡೆಂಟ್ಸ್‌ಗಳು ಇವೆ. ಇವು ಮನಸ್ಸಿಗೆ ಶಾಂತಿ ನೀಡುತ್ತವೆ, ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಖಿನ್ನತೆಯನ್ನು ತಡೆಯುತ್ತವೆ.
ಜೀರ್ಣಾಂಗಕ್ಕೆ ಒಳ್ಳೆಯದು: ಬಾಳೆ ಹೂ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಹೊಟ್ಟೆ ನೋವು, ವಾಂತಿ, ಅತಿಸಾರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯಕ.
ರಕ್ತಹೀನತೆ ನಿವಾರಣೆ: ಬಾಳೆ ಹೂ ಕಬ್ಬಿಣದಿಂದ ತುಂಬಿದೆ. ಇದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ರಕ್ತಕ್ಕೆ ಸಂಬಂಧಿಸಿದ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ.
ಹೀಗಾಗಿ, ಅವಕಾಶ ಸಿಕ್ಕಾಗ ಬಾಳೆ ಹೂ ತಿನ್ನುವುದನ್ನು ಬಿಡಬೇಡಿ. ಇದು ರುಚಿಕರವಾಗಿದ್ದು ಆರೋಗ್ಯಕ್ಕೂ ಒಳ್ಳೆಯದು.