ನಿಯಮಿತವಾಗಿ ಖರ್ಜೂರ (Dates) ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ. ಖರ್ಜೂರದಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ ಮತ್ತು ವಿಟಮಿನ್ ಬಿ6 ಸೇರಿದಂತೆ ಅಗತ್ಯವಿರುವ ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ಧವಾಗಿವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ: ಖರ್ಜೂರದಲ್ಲಿರುವ ನಾರಿನಾಂಶವು ಕರುಳಿಗೆ ಉತ್ತಮ. ಇದು ಜೀರ್ಣಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡುತ್ತದೆ ಮತ್ತು ಉತ್ತಮ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ.
ತಕ್ಷಣ ಶಕ್ತಿ ಕೊಡುತ್ತದೆ: ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್‌ನಂತಹ ನೈಸರ್ಗಿಕ ಸಕ್ಕರೆಗಳಿಂದ ಕೂಡಿರುವ ಖರ್ಜೂರವು ತ್ವರಿತ ಶಕ್ತಿಯನ್ನು ನೀಡುತ್ತದೆ.
ಮೆದುಳಿನ ಆರೋಗ್ಯಕ್ಕೆ ಸಹಾಯಕ: ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಮೆದುಳಿನಲ್ಲಿ ಆಲ್ಝೈಮರ್‌ನಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.
ಹೃದಯ ಆರೋಗ್ಯವನ್ನು ಕಾಪಾಡುತ್ತದೆ: ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೃದಯ ಬಡಿತ ಸರಿಯಾಗಿ ನಡೆಯಲು ನೆರವಾಗುತ್ತವೆ. ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ಸಿಹಿ ತಿನ್ನುವ ಇಚ್ಛೆ ಕಡಿಮೆ ಮಾಡುತ್ತದೆ: ಫೈಬರ್ ಜಾಸ್ತಿ ಇರುವ ಖರ್ಜೂರವು ಹೊಟ್ಟೆ ತುಂಬಿದಂತೆ ಅನುಭವವಾಗುವಂತೆ ಮಾಡುತ್ತದೆ. ಇದರಿಂದ ಅತಿಯಾದ ಸಿಹಿ ತಿನ್ನುವುದು ಕಡಿಮೆ ಆಗುತ್ತದೆ.
ಮೂಳೆಗಳು ಬಲವಾಗುತ್ತವೆ: ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಬೋರಾನ್ ಮುಂತಾದ ಅಂಶಗಳಿದ್ದು, ಇವು ಮೂಳೆಗಳನ್ನು ಬಲಪಡಿಸುತ್ತವೆ.
ಉತ್ತಮ ನಿದ್ರೆಗಾಗಿ ಸಹಾಯಕ: ಮೆಗ್ನೀಸಿಯಮ್ ಮತ್ತು ಟ್ರಿಪ್ಟೋಫಾನ್ ನಿದ್ರೆಗೆ ಸಹಾಯ ಮಾಡುತ್ತವೆ. ಖರ್ಜೂರ ತಿಂದರೆ ನಿದ್ರೆ ಸುಲಭವಾಗಬಹುದು.
ಚರ್ಮದ ಆರೋಗ್ಯ ಕಾಪಾಡುತ್ತದೆ: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ತಾಜಾತನ ಕಾಪಾಡುತ್ತವೆ, ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ.
ರಕ್ತಹೀನತೆ ತಡೆಯುತ್ತದೆ: ಇದರಲ್ಲಿರುವ ಕಬ್ಬಿಣ ಮತ್ತು ವಿಟಮಿನ್ ಸಿ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಸೂಕ್ಷ್ಮ ಪೋಷಕಾಂಶಗಳು ಮತ್ತು ಸೆಲೆನಿಯಮ್ ಖರ್ಜೂರದಲ್ಲಿ ಇರುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಸೂಚನೆ: ಮೇಲ್ಕಂಡ ಮಾಹಿತಿಯು ಸಾಮಾನ್ಯ ಅರಿವಿಗೆ ಮಾತ್ರ. ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.