Bengaluru: ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಇಂದು (ಜು.25) ರೆಡ್ ಅಲರ್ಟ್ (Red alert) ಘೋಷಿಸಲಾಗಿದೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಜುಲೈ 31ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
- ಅಲರ್ಟ್ ಘೋಷಿಸಿರುವ ಜಿಲ್ಲೆಗಳು: ದಕ್ಷಿಣ ಕನ್ನಡ
- ಆರೆಂಜ್ ಅಲರ್ಟ್ (ಭಾರಿ ಮಳೆಯ ಸಾಧ್ಯತೆ)
- ಉಡುಪಿ
- ಉತ್ತರ ಕನ್ನಡ
- ಶಿವಮೊಗ್ಗ
- ಚಿಕ್ಕಮಗಳೂರು
- ಯೆಲ್ಲೋ ಅಲರ್ಟ್ (ಮಿತ ಮಳೆಯ ಮುನ್ಸೂಚನೆ)
- ಕೊಡಗು, ಹಾಸನ, ದಾವಣಗೆರೆ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಧಾರವಾಡ, ಬೀದರ್, ಬೆಳಗಾವಿ
- ಸಾಧಾರಣ ಮಳೆ ನಿರೀಕ್ಷೆಯಿರುವ ಜಿಲ್ಲೆಗಳು
- ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ
- ಭಾರಿ ಮಳೆ ಸಂಭವಿಸಿದ ಪ್ರದೇಶಗಳು
- ಗೇರುಸೊಪ್ಪ, ಆಗುಂಬೆ, ಹೊನ್ನಾವರ, ಕಾರವಾರ, ಶಿರಾಲಿ, ಸಿದ್ದಾಪುರ, ಮಂಗಳೂರು, ಕುಂದಾಪುರ, ಕಾರ್ಕಳ, ಶೃಂಗೇರಿ, ಪುತ್ತೂರು, ಧರ್ಮಸ್ಥಳ, ಸುಳ್ಯ, ಬಂಟ್ವಾಳ, ಮತ್ತು ಇನ್ನೂ ಹಲವಾರು ಪಟ್ಟಣಗಳಲ್ಲಿ ಮಳೆ ಅಬ್ಬರಿಸುತ್ತಿದೆ.
ಮಹತ್ವದ ಸೂಚನೆ: ನದಿ ಸಮೀಪ, ಗುಡ್ಡಪ್ರದೇಶಗಳಲ್ಲಿ ಅಥವಾ ಜಲಾವೃತ ಪ್ರದೇಶಗಳಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕು. ತುರ್ತು ಪರಿಸ್ಥಿತಿಗೆ ತಯಾರಿ ಇಡಿ ಮತ್ತು ಸ್ಥಳೀಯ ಅಧಿಕಾರಿಗಳ ಸೂಚನೆ ಪಾಲಿಸಿ.