back to top
26.3 C
Bengaluru
Friday, July 18, 2025
HomeEnvironmentMangaluru ನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ: ಬಾಲಕಿ ಸಾವು, ಐವರ ರಕ್ಷಣೆಗೆ ಕಾರ್ಯಾಚರಣೆ

Mangaluru ನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ: ಬಾಲಕಿ ಸಾವು, ಐವರ ರಕ್ಷಣೆಗೆ ಕಾರ್ಯಾಚರಣೆ

- Advertisement -
- Advertisement -

Mangaluru: ಮಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ (Heavy rains) ಉಳ್ಳಾಲ ತಾಲೂಕಿನಲ್ಲಿ ಎರಡು ಕಡೆ ಗುಡ್ಡ ಕುಸಿದು ಮನೆಗಳ ಮೇಲೆ ಬಿದ್ದಿದೆ.
ಮೋಂಟೆಪದವು ಎಂಬಲ್ಲಿ ಐವರು ಗುಡ್ಡ ಕುಸಿತದ ಅವಶೇಷಗಳಡಿ ಸಿಲುಕಿದ್ದು, ಇಬ್ಬರನ್ನು ಈಗಾಗಲೇ ರಕ್ಷಿಸಲಾಗಿದೆ. ಉಳಿದ ಮೂವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ದೇರಳಕಟ್ಟೆಯಲ್ಲಿ ಮನೆ ಮೇಲೆ ಕಂಪೌಂಡ್ ಗೋಡೆ ಬಿದ್ದು, 6 ವರ್ಷದ ಬಾಲಕಿ ಫಾತಿಮಾ ನಯೀಮ್ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಳಾಗಿದ್ದಾರೆ. ಅಗ್ನಿಶಾಮಕದಳ ಮತ್ತು ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿದ್ದರು.

ಮಂಗಳೂರಿನ ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ತಲಪಾಡಿ ಸೇರಿ ಹಲವಾರು ಪ್ರದೇಶಗಳಲ್ಲಿ ಮಳೆಯಿಂದ ಜಲಾವೃತವಾಗಿದೆ. ಕಲ್ಲಾಪುವಿನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಲಪಾಡಿಯೊಂದೆಡೆ ಒಂದು ಮನೆ ಬಹಳ ಹಾನಿಗೊಳಗಾಗಿದೆ.

ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಪುರಸಭೆ ಮುಖ್ಯಾಧಿಕಾರಿ ಮತ್ತಡಿ ಸೇರಿದಂತೆ ಅಧಿಕಾರಿಗಳು ರಾತ್ರಿಯೇ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 30ರಂದು ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಸಲಹೆಗಳು

  • ಕಡಲತೀರ, ನದಿ ತೀರ, ತಗ್ಗು ಪ್ರದೇಶಗಳಿಗೆ ಹೋಗದಂತೆ ಜಿಲ್ಲಾಡಳಿತ ಮನವಿ ಮಾಡಿದೆ.
  • ಮೀನುಗಾರರು ನೀರಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
  • ಪ್ರವಾಸಿಗರು ಜಲಪಾತ ಮತ್ತು ಕಡಲ ತೀರದಲ್ಲಿ ಫೋಟೋ ಅಥವಾ ವೀಡಿಯೋ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.
  • ತುರ್ತು ಸಂದರ್ಭದಲ್ಲಿ ಟೋಲ್ ಫ್ರೀ ಸಂಖ್ಯೆ 1077 ಅಥವಾ ದ.ಕ.: 0824-2442590, ಉಡುಪಿ: 0820-2574802 ಗೆ ಸಂಪರ್ಕಿಸಬಹುದು.

ಜೂನ್ 2ರವರೆಗೂ ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page