Pithorgarh: ಭಾರತದ ಮುಖ್ಯ ಚುನಾವಣಾ ಆಯುಕ್ತರು (Chief Election Commissioner of India) ಪ್ರಯಾಣಿಸುತ್ತಿದ್ದ ಹೆಲಿಕ್ಟಾಪ್ಟರ್ ಉತ್ತರಾಖಂಡ್ನ ಪಿಥೋರಗಢ (Pithorgarh)ಜಿಲ್ಲೆಯಲ್ಲಿ ಚೀನಿ ಆಕ್ರಮಿತ ಟಿಬೆಟ್ (China-occupied Tibet) ಗಡಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು.
ಹೆಲಿಕಾಪ್ಟರ್ನಲ್ಲಿ (helicopter) ಸಿಇಸಿ ರಾಜೀವ್ ಕುಮಾರ್ (CEC Rajeev Kumar) ಸೇರಿದಂತೆ ಐದು ಮಂದಿ ಪ್ರಯಾಣಿಸುತ್ತಿದ್ದು, ಹೆಲಿಕಾಪ್ಟರ್ 16 ಗಂಟೆಗಳ ಬಳಿಕ ಮುನ್ಸಿಯಾರಿನಲ್ಲಿ ಸುರಕ್ಷಿತವಾಗಿ ಇಳಿದಿದೆ.
ರಾಜೀವ್ ಕುಮಾರ್ ಅವರ ಜೊತೆಗೆ ಉತ್ತರಾಖಂಡ್ನ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಮತ್ತು ಸಿಇಸಿ ಪಿಎಸ್ಒ ನವೀನ್ ಕುಮಾರ್ ಅವರು ಜೊತೆ ಪ್ರಯಾಣ ಬೆಳೆಸಿದ್ದರು.
ಬುಧವಾರ ಸಂಜೆ ಪಿಥೋರಗಢದಲ್ಲಿ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಹಿಮಾಲಯ ತಪ್ಪಿಲಿನಲ್ಲಿರುವ ರಾಲಮ್ ಗ್ರಾಮದಲ್ಲಿ ರಾತ್ರಿ ಕಳೆದರು. ಗುರುವಾರ 6.30ಕ್ಕೆ ಹೆಲಿಕಾಪ್ಟರ್ ಹಾರಾಟಕ್ಕೆ ವಾತಾವರಣ ಪೂರಕವಾಗಿದ್ದ ಹಿನ್ನೆಲೆ ಹಾರಾಟ ನಡೆಸಿದ್ದು, ಬಳಿಕ ಮುನ್ಸಿಯಾರಿ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಮಾಡಲಾಗಿದೆ.
ಅಧಿಕಾರಿಗಳ ಜೊತೆಗೆ ಐಟಿಬಿಪಿ ಮತ್ತು ಬಿಆರ್ಒ ಸೇರಿದಂತೆ ಪಿಥೋರ್ಗಢ್ನ ಆಡಳಿತಾತ್ಮಕ ಅಧಿಕಾರಿಗಳು ಹೆಲಿಪ್ಯಾಡ್ನಲ್ಲಿ ಹಾಜರಿದ್ದರು. ಮುನ್ಸಿಯರಿಯಿಂದ ಮುಖ್ಯ ಚುನಾವಣಾ ಆಯುಕ್ತರು ಐಟಿಬಿಪಿ ಕ್ಯಾಂಪ್ಗೆ ತೆರಳಿದರು.
ಘಟನೆ ಕುರಿತು ತಕ್ಷಣಕ್ಕೆ ಮುನ್ಸಿಯಾರಿಯಲ್ಲಿನ ಆಡಳಿತಾತ್ಮಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಗುರುವಾರ ಬೆಳಗ್ಗೆ ಚುನಾವಣಾ ಆಯುಕ್ತರು ಗ್ರಾಮದಿಂದ 30 ಕಿ.ಮೀ ದೂರವಿದ್ದ ಮುನ್ಸಿಯರ್ಗೆ ತಲುಪಿದರು.
ಮುಖ್ಯ ಅಭಿವೃದ್ಧಿ ಅಧಿಕಾರಿ ಡಾ.ದೀಪಕ್ ಸೈನಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಮತ್ತು ಐಟಿಬಿಪಿ ಸಿಬ್ಬಂದಿ ಹೆಲಿಪ್ಯಾಡ್ಗೆ ಆಗಮಿಸಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾತನಾಡಿದ ಅಧಿಕಾರಿಗಳು ಎಲ್ಲರೂ ಸುರಕ್ಷಿತವಾಗಿದ್ದು, ಆರೋಗ್ಯವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.