ಭಾರತದ ಪ್ರಮುಖ SUV ತಯಾರಕರಾದ ಟಾಟಾ ಮೋಟಾರ್ಸ್, (Tata Motors) ಇತ್ತೀಚೆಗೆ ಹಬ್ಬದ ಅಂಗವಾಗಿ ಟಾಟಾ ಪಂಚ್‌ನ (Tata Punch) ವಿಶೇಷ ಸೀಮಿತ ಅವಧಿಯ CAMO ಎಡಿಷನ್ ಅನ್ನು ಬಿಡುಗಡೆ ಮಾಡಿತ್ತು.
ಸದ್ಯ ಈ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಉತ್ತಮ ಮಾರಾಟ ಕಾಣುತ್ತಿದೆ. ಈ ವಿಶೇಷ ಆವೃತ್ತಿಯು ಸಾಮಾನ್ಯ ಟಾಟಾ ಪಂಚ್ SUVಗಿಂತ ಹಲವು ವಿಭಿನ್ನ ವಿನ್ಯಾಸ ಅಂಶಗಳನ್ನು ಪಡೆದುಕೊಂಡಿದೆ.
ಹೊಸ ಕಾರಿನಲ್ಲಿ, ವೈರ್ಲೆಸ್ ಚಾರ್ಜರ್, ರಿಯರ್ ಎಸಿ ವೆಂಟ್ಗಳು, 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ನೀಡಲಾಗಿದೆ.
ಕಂಫರ್ಟ್-ಟೆಕ್ ವೈಶಿಷ್ಟ್ಯಗಳ ಸೇರ್ಪಡೆಯು ಟಾಟಾ ಪಂಚ್ ಕ್ಯಾಮೊದಲ್ಲಿ ಪ್ರೀಮಿಯಂ ಮತ್ತು ಚಾಲನಾ ಅನುಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಹಾಗೆಯೇ ವೇಗದ ಸಿ-ಟೈಪ್ ಯುಎಸ್ಬಿ ಚಾರ್ಜರ್ ಮತ್ತು ಆರ್ಮ್‌ರೆಸ್ಟ್‌ನೊಂದಿಗೆ ಗ್ರ್ಯಾಂಡ್ ಕನ್ಸೋಲ್ ನೀಡಲಾಗಿದೆ. ಸಣ್ಣ SUVಯಾದರೂ ವಿಶಾಲವಾದ ಒಳಾಂಗಣ ಮತ್ತು ಸಂಪೂರ್ಣ ಸುರಕ್ಷತೆಯೊಂದಿಗೆ SUV ಗುಣಲಕ್ಷಣಗಳನ್ನು ಕಾಂಪ್ಯಾಕ್ಟ್ ವಿಭಾಗದಲ್ಲಿ ಸಮಗ್ರ ಪ್ಯಾಕೇಜ್ ಅನ್ನು ನೀಡುವ ಮೂಲಕ ಸಣ್ಣ ಫ್ಯಾಮಿಲಿಗಳ ಫೇವರೆಟ್ ಕಾರಾಗಿದೆ.
ಇಂದಿಗೂ ಬೇಡಿಕೆ ಕಡಿಮೆಯಾಗದೇ ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಈ ಬೇಡಿಕೆಯ ಮೇರೆಗೆ, ಪಂಚ್‌ನ ಸೀಮಿತ CAMO ಕಾರನ್ನು ಪರಿಚಯಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.
ಭಾರತದ ಸುರಕ್ಷಿತ ಸಬ್-ಕಾಂಪ್ಯಾಕ್ಟ್ SUV ಆಗಿರುವ ಟಾಟಾ ಪಂಚ್, ಪೊಸಿಷನ್ ಮತ್ತು ವೈವಿಧ್ಯಮಯ ಭಾರತೀಯ ಭೂಪ್ರದೇಶಗಳನ್ನು ಸಲೀಸಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
ದೃಢವಾದ ವಿನ್ಯಾಸ, 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಕಮಾಂಡಿಂಗ್ ಡ್ರೈವಿಂಗ್ ವೀಶೆಷತೆಗಳನ್ನು ಒಳಗೊಂಡಿದೆ. 2021ರ GNCAP ಸುರಕ್ಷತಾ ಮಾನದಂಡಗಳ ಅಡಿಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.
ಟಾಟಾ ಮೋಟಾರ್ಸ್ ತನ್ನ ಪಂಚ್ ಮೈಕ್ರೋ ಎಸ್ಯುವಿಯನ್ನು ಪೆಟ್ರೋಲ್, ಡ್ಯುಯಲ್-ಸಿಲಿಂಡರ್ CNG ಮತ್ತು ಎಲೆಕ್ಟ್ರಿಕ್ ಸೇರಿದಂತೆ ಬಹು ಪವರ್ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಾಗಿಸಿದೆ.
ಸದ್ಯ ತನ್ನ ವಿಭಾಗದಲ್ಲಿ ಸಣ್ಣ ಫ್ಯಾಮಿಲಿಗೆ ಉತ್ತಮ ಆಯ್ಕೆಯಾಗಿದ್ದು, ಈಗ ಹೊಸ ಕ್ಯಾಮೊ ಎಡಿಷನ್ ಹಬ್ಬದ ಸೀಸನ್ನಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡು ಮುನ್ನುಗ್ಗುತ್ತಿದೆ ಎಂದು ಕಂಪನಿ ತಿಳಿಸಿದೆ.