back to top
23.2 C
Bengaluru
Wednesday, February 25, 2026
HomeKarnatakaಹಿಂದೂ ನಾಯಕರೆ ಟಾರ್ಗೆಟ್? Congress Government ಕ್ರಮಕ್ಕೆ BJP ಆಕ್ಷೇಪ

ಹಿಂದೂ ನಾಯಕರೆ ಟಾರ್ಗೆಟ್? Congress Government ಕ್ರಮಕ್ಕೆ BJP ಆಕ್ಷೇಪ

- Advertisement -
- Advertisement -

Bengaluru: ದಕ್ಷಿಣ ಕನ್ನಡದಲ್ಲಿ ಕೆಲವರು ತಲವಾರು, ಕತ್ತಿ ತೋರಿಸಿ ಹತ್ಯೆ ಮಾಡುವಂತೆ ಮಾತನಾಡಿದ್ದರೂ, ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಬಿಜೆಪಿ ನಾಯಕ ವಿ. ಸುನೀಲ್ ಕುಮಾರ್ (BJP leader V. Sunil Kumar) ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಗಳ ನಾಯಕರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಂಡು ದ್ವೇಷ ಭಾಷೆಯನ್ನು ಖುದ್ದು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ 15 ಮಂದಿಗೆ ಮಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಯಾರೋ ತಲವಾರು, ಕತ್ತಿ ತೋರಿಸಿ ಹತ್ಯೆಯ ಮಾತು ಮಾಡಿದ್ದಾರೆ. ಅವರ ಮೇಲೆ ಕ್ರಮವೇ ಇಲ್ಲ. ಆದರೆ ಹಿಂದೂ ನಾಯಕರ ವಿರುದ್ಧ ಮಾತ್ರ ಕಾನೂನು ಹಾದಿ ಹಿಡಿಯಲಾಗುತ್ತಿದೆ. ಇದು ಏಕಪಕ್ಷೀಯ ನಡೆ,” ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪೊಲೀಸರ ಮೂಲಕ ಜನರ ಮೇಲೆಯೇ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಹಿಂದೂ ಮುಖಂಡರ ಮೇಲೆ ನಿಖರವಾದ ಸಾಕ್ಷಿ ಇಲ್ಲದಿದ್ದರೂ, ಕೇಸು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರ ದೂರು.

“ದ್ವೇಷ ಭಾಷೆ ಮಾತನಾಡಿದವರನ್ನು ಬಿಟ್ಟುಕೊಟ್ಟು, ಸಮಾಜಮಾಧ್ಯಮದಲ್ಲಿ ಸಂದೇಶ ಹಾಕಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳುವುದು ಎಷ್ಟು ನ್ಯಾಯ?” ಎಂಬ ಪ್ರಶ್ನೆಯೂ ಅವರು ಎತ್ತಿದ್ದಾರೆ.

ಈ ಸಂದರ್ಭದಲ್ಲಿ, ಮಂಗಳೂರು ಎಸ್‌ಪಿ ಅರುಣ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು 15 ಮಂದಿಗೆ ಎಫ್ಐಆರ್ ಹಾಕಿದ್ದಾರೆ. ಪುತ್ತೂರು ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕಲಬುರಗಿ ಜಿಲ್ಲೆಯ ಶಹಾಬಾದ್‌ಗೆ ಗಡೀಪಾರು ನೋಟಿಸ್ ಕೂಡಾ ನೀಡಲಾಗಿದೆ.

ಇವೆಲ್ಲದರ ಮಧ್ಯೆ ಸುನೀಲ್ ಕುಮಾರ್ ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page