
California: ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಕಿಡಿಗೇಡಿಗಳು ಭಾರತ ವಿರೋಧಿ ಬರಹಗಳನ್ನು (Anti-India graffiti) ಬರೆದು ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಬಿಎಪಿಎಸ್ ಈ ಬಗ್ಗೆ ಹೇಳಿಕೆ ನೀಡಿದ್ದು, ಇದು ಹಿಂದೂ ಸಮುದಾಯದ ವಿರುದ್ಧದ ದ್ವೇಷದ ಮತ್ತೊಂದು ಉದಾಹರಣೆಯಾಗಿದೆ ಎಂದು ತಿಳಿಸಿದೆ. ಅವರು ಶಾಂತಿ ಮತ್ತು ಸಹಾನುಭೂತಿ ಮೂಲ ಮನ್ನಿಸುವ ನಿಲುವನ್ನು ಪುನರುಚ್ಚರಿಸಿದ್ದಾರೆ.
ಚಿನೋ ಹಿಲ್ಸ್ ಪೊಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಈ ಘಟನೆಯ ಬಗ್ಗೆ ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ (CoHNA) ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಮಾಹಿತಿ ಹಂಚಿಕೊಂಡಿದೆ. ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕೂ ಮುಂಚಿತವಾಗಿ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ ಎಂದು ಹೇಳಲಾಗಿದೆ.
ಹಿಂದೂ ವಿರೋಧಿ ಸಂದೇಶಗಳು ಸ್ಥಳೀಯ ಹಿಂದೂ ಸಮುದಾಯದಲ್ಲಿ ಆತಂಕ ಸೃಷ್ಟಿಸಿವೆ. ಆದರೂ, ಸಮುದಾಯವು ಒಗ್ಗಟ್ಟಿನಿಂದ ಇಂತಹ ದ್ವೇಷಪೂರಿತ ಕೃತ್ಯಗಳಿಗೆ ಪ್ರತಿಯಾಗಿ ಶಾಂತಿ ಮತ್ತು ಸಹಿಷ್ಣುತೆಯನ್ನು ಮುಂದುವರಿಸುವ ನಿರ್ಧಾರವನ್ನು ದೃಢಪಡಿಸಿದೆ.
ಇದೇ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, 2023ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋ ಹಾಗೂ ನ್ಯೂಯಾರ್ಕ್‌ನಲ್ಲಿಯೂ ಹಿಂದೂ ದೇವಾಲಯಗಳ ಮೇಲೆ ಹಾನಿ ಮಾಡಲಾಗಿತ್ತು.