Bengaluru: ಕರ್ನಾಟಕ ಸರ್ಕಾರ ಆರೋಗ್ಯ ಇಲಾಖೆ HMPV (Human Metapneumo virus) ಪರೀಕ್ಷೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಆಸ್ಪತ್ರೆಗಳಿಗೆ ಹೋಗುವ ಜನರು ಈ ವೈರಸ್‌ಗಾಗಿ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದೆ. ಜೊತೆಗೆ, ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳ ಮೇಲೆ ನಿಗಾ ಇಡಲಾಗುವುದು ಎಂದೂ ಇಲಾಖೆ ತಿಳಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಈ ಟೆಸ್ಟ್‌ಗಳಿಗೆ ₹10,000-₹12,000 ರೂಪಾಯಿಯ ದರ ಇದ್ದು, ಇದರ ಅಗತ್ಯವಿಲ್ಲ ಎಂಬ ಅಧಿಕೃತ ಪ್ರಕಟಣೆಯನ್ನು ಇಂದು (ಬುಧವಾರ) ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಇಲಾಖೆ ತಿಳಿಸಿದಂತೆ, ಚಳಿಗಾಲದಲ್ಲಿ ವೈರಸ್‌ಗಳು ಸಾಮಾನ್ಯ. ಈ HMPV ವೈರಸ್ ಅಪಾಯಕಾರಿ ಇಲ್ಲ, ಹಾಗೆಯೇ ಚೀನಾದಲ್ಲಿ ಪತ್ತೆಯಾದ ವೈರಸ್‌ಗಿಂತ ಬೇರೆಯದು ಎಂಬುದಾಗಿ ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಮಕ್ಕಳು ಈ ವೈರಸ್‌ಗೆ ತುತ್ತಾಗಿದ್ದರು, ಆದರೆ, ಅವರು ಈಗ ಆರೋಗ್ಯವಾಗಿದ್ದಾರೆ. ದೇಶಾದ್ಯಂತ 7 HMPV ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ: ಕರ್ನಾಟಕದಲ್ಲಿ 2, ತಮಿಳುನಾಡು 2, ಮಹಾರಾಷ್ಟ್ರ 2, ಮತ್ತು ಗುಜರಾತ್ 1. ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿಕೊಳ್ಳಿ ಮತ್ತು ಆರೋಗ್ಯ ಕಾಪಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.