Bengaluru: ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ (HMPV) ವೈರಸ್ ಪತ್ತೆಯಾಗಿದೆ. ಜ್ವರ ಕಾಣಿಸಿಕೊಂಡಿದ್ದರಿಂದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತ ಪರೀಕ್ಷೆಯಲ್ಲಿ HMPV ವೈರಸ್ ದೃಢಪಟ್ಟಿದೆ.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದಂತೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಭಾರತದಲ್ಲಿ ಸಾಮಾನ್ಯವಾಗಿ HMPV ವೈರಸ್ ಶೇ. 0.78 ರಷ್ಟು ಕಾಣಿಸಿಕೊಳ್ಳುತ್ತದೆ. ಆದರೆ, ಇದು ಚೀನಾದ ತಳಿ ವೈರಸ್ಸೇ ಅಥವಾ ಇಲ್ಲವೇ ಸಾಮಾನ್ಯ HMPV ಎಂಬುದರ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ.
ಸೋಂಕಿತ ಮಗು ಮತ್ತು ಅದರ ಕುಟುಂಬ ಸದಸ್ಯರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆರೋಗ್ಯ ಇಲಾಖೆ ಈ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸುತ್ತಿದೆ.
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) 2001ರಲ್ಲಿ ಪ್ರಥಮವಾಗಿ ಪತ್ತೆಯಾಯಿತು. ಆದರೆ, ತಜ್ಞರ ಹೇಳಿಕೆಯಲ್ಲಿ 1958ರಿಂದಲೂ ಈ ವೈರಸ್ ವ್ಯಾಪಕವಾಗಿತ್ತು ಎಂದು ತಿಳಿದುಬಂದಿದೆ.
HMPV ಮತ್ತು ಕೊರೊನಾ ವೈರಸ್ ಇಬ್ಬರಲ್ಲೂ ಉಸಿರಾಟದ ಸಮಸ್ಯೆ ಉಂಟಾಗಬಹುದು. ವಿಶೇಷವಾಗಿ, ಚಿಕ್ಕ ಮಕ್ಕಳು, ಹಿರಿಯರು, ಹಾಗೂ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ಅಪಾಯಕ್ಕೊಳಗಾಗುತ್ತಾರೆ. ಆದರೆ, HMPV ಹರಡುವಿಕೆ ತಡೆಗೆ ಯಾವುದೇ ಲಸಿಕೆ ಇಲ್ಲ.
ಸದ್ಯ ಭಾರತದಲ್ಲಿ HMPV ವೈರಸ್ ಕುರಿತಾಗಿ ಗಂಭೀರ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.