Honda Cars India ಶೀಘ್ರದಲ್ಲೇ ತನ್ನ ಹೊಸ ಹೋಂಡಾ ಎಲಿವೇಟ್ ಬ್ಲ್ಯಾಕ್ (Honda Elevate Black) ಎಡಿಷನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಕಾರು ಇತ್ತೀಚೆಗೆ ತನ್ನ ಪ್ರೊಡಕ್ಷನ್-ರೆಡಿ ಇಮೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಹೋಂಡಾ ಕಾರ್ಸ್ ಈ SUVಯನ್ನು ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಿದೆ: ಎಲಿವೇಟ್ ಬ್ಲ್ಯಾಕ್ ಎಡಿಷನ್ ಮತ್ತು ಎಲಿವೇಟ್ ಸಿಗ್ನೇಚರ್ ಬ್ಲ್ಯಾಕ್ ಎಡಿಷನ್. ಆಟೋಕಾರ್ ಇಂಡಿಯಾದ ವರದಿ ಪ್ರಕಾರ, ಈ ಕಾರು ಜನವರಿ 7ರಂದು ಲಾಂಚ್ ಆಗಲಿದೆ.
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್‌ನ ಎಕ್ಸ್ಟೀರಿಯರ್ ನಲ್ಲಿ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ಪೇಂಟ್, ಗ್ಲೋಸ್ ಬ್ಲ್ಯಾಕ್ ಅಲಾಯ್ ವೀಲ್ ಗಳು, ಕ್ರೋಮ್ ಫಿನಿಶ್ ಹೊಂದಿದ ಗ್ರಿಲ್ ಮತ್ತು ಸಿಲ್ವರ್ ಫಿನಿಶ್ ಹೊಂದಿದ ರೂಫ್ ರೈಲ್ಸ್, ಡೋರ್ ನ ಕೆಳಭಾಗಗಳಿದ್ದು, ಒಳಭಾಗದಲ್ಲಿ ಕಪ್ಪು ಲೆಥೆರೆಟ್ ಸೀಟ್ ಗಳು ಕೊಡಲಾಗಿದೆ.
ವೈಶಿಷ್ಟ್ಯಗಳು
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ಮತ್ತು ಎಲಿವೇಟ್ ಸಿಗ್ನೇಚರ್ ಬ್ಲ್ಯಾಕ್ ಆವೃತ್ತಿಗಳು ಉನ್ನತ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ 7.0-ಇಂಚಿನ TFT ಡಿಸ್ಪ್ಲೇ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ADAS, ಸಿಂಗಲ್-ಪೇನ್ ಸನ್‌ರೂಫ್, ಆಟೋ ಹೆಡ್‌ಲೈಟ್‌ಗಳು, ಮತ್ತು ವೈಪರ್ ಗಳನ್ನು ಒಳಗೊಂಡಿರುತ್ತವೆ.
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ಪವರ್ಟ್ರೇನ್
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್‌ನ ಪವರ್ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. 1.5-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು 120 bhp ಪವರ್ ನೊಂದಿಗೆ ನೀಡಲಾಗುತ್ತದೆ. ಇದು ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿರುತ್ತದೆ.