Honnali, Davanagere : ಹೊನ್ನಾಳಿ ನಗರದ ತುಮ್ಕೋಸ್ ಆವರಣದಲ್ಲಿ 30 ರೈತ ಫಲಾನುಭವಿಗಳಿಗೆ ತುಂತುರು ನೀರಾವರಿ (Sprinkler System) ಘಟಕದ ಪರಿಕರಗಳನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ (M.P. Renukacharya) ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಘಟಕಕ್ಕೆ ಸರ್ಕಾರವು 90% ರಷ್ಟು ರಿಯಾಯಿತಿ ದರದಲ್ಲಿ ಅನುದಾನ ಲಭ್ಯವಿದ್ದು, ರೈತರು ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆದುಕೊಳ್ಳಬಹುದು” ಎಂದು ಹೇಳಿದರು.
“75 mm ಘಟಕದ ಒಟ್ಟು ವೆಚ್ಚ ₹ 20,702 ಇದ್ದು, ಸರ್ಕಾರದ ಸಹಾಯಧನ ₹ 18,632 ಇರುತ್ತದೆ. ಅದಕ್ಕೆ ರೈತರ ವಂತಿಕೆ ₹ 2,070 ಪಾವತಿಸಬೇಕು. ಅದೇ ರೀತಿ 63 mm ಘಟಕದ ಒಟ್ಟು ವೆಚ್ಚ ₹ 19,324 ಇದ್ದು, ಸರ್ಕಾರದ ಸಹಾಯಧನ ₹ 17,392 ಇರುತ್ತದೆ. ಅದಕ್ಕೆ ರೈತರ ವಂತಿಕೆ ₹ 1,932 ಆಗಿರುತ್ತದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ಹೇಳಿದರು.
ತಾಲ್ಲೂಕು BJP ಮುಖಂಡರಾದ ಅರಕೆರೆ ನಾಗರಾಜ್, ಶಿವು ಹುಡೇದ್, ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹಾಗೂ ರೈತರು ಉಪಸ್ಥಿತರಿದ್ದರು.