ಭಾರತದ ವಸತಿ ಮಾರುಕಟ್ಟೆಯಲ್ಲಿ ಉತ್ಕೃಷ್ಟ ಬೆಳವಣಿಗೆಗಳೊಂದಿಗೆ 2024 ರ ಕೊನೆಯಲ್ಲಿ 3.05 ಲಕ್ಷ ಅಪಾರ್ಟ್ಮೆಂಟ್ ಗಳು ಮಾರಾಟವಾಗಿದ್ದವು. ಇತ್ತೀಚೆಗೆ, ವಸತಿ ಯೋಜನೆಗಳಲ್ಲಿ (Housing project) 55% ಬೆಲೆ ಏರಿಕೆ (price hike) ಕಂಡುಬಂದಿದೆ. Bengaluru ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ಯೋಜನೆಗಳಲ್ಲಿ ಬೆಲೆ ಏರಿಕೆ ಸ್ಫೋಟಕವಾಗಿದ್ದು, 55% ವರೆಗೆ ಹೆಚ್ಚಳವಾಗಿದ್ದಾಗಿದೆ.
ಸ್ಯಾವಿಲ್ಸ್ ಇಂಡಿಯಾ ಸಂಸ್ಥೆಯ ವರದಿ ಪ್ರಕಾರ, ಬೆಂಗಳೂರು ಸರಾಸರಿ 25% ಬೆಲೆ ಏರಿಕೆಯನ್ನು ಕಂಡಿದೆ. ಮುಂಬರುವ ದಿನಗಳಲ್ಲಿ, ದುಬಾರಿ ಮನೆಗಳ ಸೇಲ್ಸ್ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನವನ್ನು ಪಡೆಯಲಿದೆ ಎಂದು ತಿಳಿಸಿದೆ.
2024 ರ ದ್ವಿತೀಯಾರ್ಧದಲ್ಲಿ, ಬೆಂಗಳೂರು ಬಾಡಿಗೆ ಮೌಲ್ಯದಲ್ಲಿ ಶೇ 10% ರಷ್ಟು ಹೆಚ್ಚಳವನ್ನು ಅನುಭವಿಸಿದೆ.