ಹೈಪೋಥರ್ಮಿಯಾ (Hypothermia) ಎಂದರೆ ದೇಹದ ಉಷ್ಣತೆಯು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿರುವ ಸ್ಥಿತಿ. ಇದರಿಂದ ತಕ್ಷಣ ಚಿಕಿತ್ಸೆ ನೀಡದಿದ್ದರೆ ಹೃದಯಾಘಾತ ಅಥವಾ ಸಾವು ಸಂಭವಿಸಬಹುದು. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ, ಹಾಗೂ ಇದು ದೇಹವನ್ನು ಹಾನಿಕರವಾಗಿರಬಹುದು.
ಹೈಪೋಥರ್ಮಿಯಾ ಆಗುವಾಗ ದೇಹದ ವಿವಿಧ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೃದಯ, ನರಮಂಡಲ ಮತ್ತು ಇತರ ಅಂಗಗಳು ನಿಗದಿತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಹೃದಯ ಸ್ತಂಭನ ಮತ್ತು ಸಾವು ಸಂಭವಿಸಬಹುದು.
ಹೈಪೋಥರ್ಮಿಯಾ ಏಕೆ ಸಂಭವಿಸುತ್ತದೆ?
- ಚಳಿಗಾಲದಲ್ಲಿ ಶೀತ ವಾತಾವರಣದಲ್ಲಿ ಹೆಚ್ಚು ಸಮಯ ಕಳೆದರೆ
- ಬೆಚ್ಚಗಿನ ಬಟ್ಟೆಗಳನ್ನು ಧರಿಸದೇ ಇರುವುದು
- ದೀರ್ಘಕಾಲದಿಂದ ಕಡಿಮೆ ಉಷ್ಣತೆಯಲ್ಲಿ ಇರುವುದು
ಹೈಪೋಥರ್ಮಿಯಾ ರೋಗಲಕ್ಷಣಗಳು
- ಮೈನಡುಕ
- ಅತಿಯಾದ ಚಳಿಯ ಭಾವನೆ
- ತೀವ್ರ ತಲೆನೋವು
- ಪ್ರಜ್ಞಾಹೀನತೆ
- ಸುಸ್ತು ಮತ್ತು ಆಯಾಸ
- ಅಸ್ಪಷ್ಟ ಮಾತು
ಹೈಪೋಥರ್ಮಿಯಾ ತಡೆಯುವ ಮುಂಜಾಗ್ರತ ಕ್ರಮಗಳು
- ದೇಹವನ್ನು ಬೆಚ್ಚಗಿರಿಸುವ ಆಹಾರ ಸೇವನೆ
- ಚಳಿಗಾಲದಲ್ಲಿ ಕಡಿಮೆ ತಾಪಮಾನದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು
- ನಿಯಮಿತ ವ್ಯಾಯಾಮ ಮಾಡಿ ದೇಹವನ್ನು ಬೆಚ್ಚಗಿಡುವುದು
- ಚಳಿಗಾಲಕ್ಕೆ ಸೂಕ್ತವಾದ ಬಟ್ಟೆಗಳನ್ನು ಧರಿಸುವುದು