Washington, USA: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan-Afghanistan) ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸುವುದು ನನಗೆ ತುಂಬಾ ಸುಲಭ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗೆ ನಡೆದ ಸಭೆ ಮತ್ತು ಭೋಜನದ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, “ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಯುತ್ತಿದೆ ಎಂಬುದನ್ನು ನಾನು ಅರಿತಿದ್ದೇನೆ. ನಾನು ನಿರ್ಧರಿಸಿದರೆ ಈ ಸಂಘರ್ಷವನ್ನು ಪರಿಹರಿಸುವುದು ನನಗೆ ಸುಲಭ” ಎಂದು ಹೇಳಿದರು.
ಟ್ರಂಪ್ ಜನರ ಪ್ರಾಣವನ್ನು ಉಳಿಸುವುದನ್ನು ಇಷ್ಟಪಡುತ್ತಾರೆ. ಅವರು ಹೇಳಿದರು, “ನಾನು ಈಗುವರೆಗೂ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ. ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಭಾವಿಸುತ್ತೇನೆ.”
ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ಬಗ್ಗೆ ಪರೋಕ್ಷವಾಗಿ ವಿಷಾದ ವ್ಯಕ್ತಪಡಿಸಿದ್ದರು. “ಈವರೆಗೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದರೂ ನನಗೆ ಪ್ರಶಸ್ತಿ ಸಿಕ್ಕಿಲ್ಲ. ಜನರು ಪ್ರತಿಯೊಬ್ಬ ಯುದ್ಧ ನಿಲ್ಲಿಸಿದಾಗ ಅದನ್ನು ಮರೆತು ಬಿಡುತ್ತಾರೆ. ನನಗೆ ಪ್ರಶಸ್ತಿ ಸಿಕ್ಕಿಲ್ಲ, ಆದರೆ ನಾನು ಜೀವಗಳನ್ನು ಉಳಿಸುವುದರ ಮೇಲೆ ಮಾತ್ರ ಕಾಳಜಿ ವಹಿಸುತ್ತೇನೆ” ಎಂದು ಹೇಳಿದರು.
ಈ ಮಧ್ಯೆ, ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಹೊಸ ವಾಯುದಾಳಿಯನ್ನು ನಡೆಸಿದೆ. ಬುಧವಾರ ಎರಡು ದೇಶಗಳ ನಡುವೆ ಕದನ ವಿರಾಮ ಒಪ್ಪಂದವಾಗಿದ್ದರೂ, ಉತ್ತರ ವಜೀರಿಸ್ತಾನದ ಮಿಲಿಟರಿ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ಇಸ್ಲಾಮಾಬಾದ್ ಮತ್ತು ಕಾಬೂಲ್ ಕದನ ವಿರಾಮವನ್ನು ವಿಸ್ತರಿಸಿದ್ದಾರೆ ಎಂದು ವರದಿಯಾಗಿದೆ.







