back to top
26.3 C
Bengaluru
Friday, July 18, 2025
HomeSportsCricketICC ಟೆಸ್ಟ್ ರ‍್ಯಾಂಕಿಂಗ್‌: Harry Brook 27 ತಿಂಗಳಲ್ಲಿ ಅಗ್ರಸ್ಥಾನ

ICC ಟೆಸ್ಟ್ ರ‍್ಯಾಂಕಿಂಗ್‌: Harry Brook 27 ತಿಂಗಳಲ್ಲಿ ಅಗ್ರಸ್ಥಾನ

- Advertisement -
- Advertisement -

ICC ಟೆಸ್ಟ್ ರ‍್ಯಾಂಕಿಂಗ್‌ (ICC Test Ranking) ಪ್ರಕಟವಾಗಿದ್ದು, ಇಂಗ್ಲೆಂಡ್ ತಂಡದ ಯುವ ಆಟಗಾರ ಹ್ಯಾರಿ ಬ್ರೂಕ್ (Harry Brook) 27 ತಿಂಗಳಲ್ಲೇ ನಂಬರ್ 1 ಟೆಸ್ಟ್ ಬ್ಯಾಟರ್ ಆಗಿ ಉನ್ನತ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. 25 ವರ್ಷದ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ 38 ಟೆಸ್ಟ್ ಇನಿಂಗ್ಸ್ ಗಳಲ್ಲಿ 8 ಶತಕಗಳು ಹಾಗೂ 10 ಅರ್ಧಶತಕಗಳನ್ನು ಬಾರಿಸಿದ್ದರಿಂದ 61.62 ಸರಾಸರಿಯೊಂದಿಗೆ 898 ಅಂಕಗಳನ್ನು ಸಂಪಾದಿಸಿಕೊಂಡಿದ್ದಾರೆ.

2022 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪ್ರವೇಶಿಸಿದ ಬ್ರೂಕ್ ಕೇವಲ 23 ಪಂದ್ಯಗಳಲ್ಲಿ 2280 ರನ್ ಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ನ ಜೋ ರೂಟ್ (897 ಅಂಕಗಳು) ಎರಡನೇ ಸ್ಥಾನದಲ್ಲಿದ್ದಾರೆ, ಹಾಗೂ ನ್ಯೂಝಿಲೆಂಡ್ ತಂಡದ ಕೇನ್ ವಿಲಿಯಮ್ಸನ್ (812 ಅಂಕಗಳು) ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಐಸಿಸಿ ಟಾಪ್-5 ರ‍್ಯಾಂಕಿಂಗ್‌ನಲ್ಲಿರುವ ಕೆಲವು ಮುಖ್ಯ ಆಟಗಾರರು

  • 4ನೇ ಸ್ಥಾನ: ಯಶಸ್ವಿ ಜೈಸ್ವಾಲ್ (811 ಅಂಕಗಳು) – ಟಾಪ್-5 ನಲ್ಲಿ ಇರುವ ಏಕೈಕ ಭಾರತೀಯ.
  • 5ನೇ ಸ್ಥಾನ: ಟ್ರಾವಿಸ್ ಹೆಡ್ (781 ಅಂಕಗಳು).
  • 6ನೇ ಸ್ಥಾನ: ಕಮಿಂದು ಮೆಂಡಿಸ್ (759 ಅಂಕಗಳು) – ಶ್ರೀಲಂಕಾ.
  • 7ನೇ ಸ್ಥಾನ: ಟೆಂಬಾ ಬವುಮಾ (753 ಅಂಕಗಳು) – ದಕ್ಷಿಣ ಆಫ್ರಿಕಾ.
  • 8ನೇ ಸ್ಥಾನ: ಡೇರಿಲ್ ಮಿಚೆಲ್ (729 ಅಂಕಗಳು) – ನ್ಯೂಝಿಲೆಂಡ್.
  • 9ನೇ ಸ್ಥಾನ: ರಿಷಭ್ ಪಂತ್ (724 ಅಂಕಗಳು).
  • 10ನೇ ಸ್ಥಾನ: ಸೌದ್ ಶಕೀಲ್ (724 ಅಂಕಗಳು) – ಪಾಕಿಸ್ತಾನ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page