Search
WhatsApp alerts

Home › Business

ICICI Bank: ಮಿನಿಮಮ್ ಅಕೌಂಟ್ ಬ್ಯಾಲನ್ಸ್ 50,000 ರೂ ನಿಂದ, 15,000 ರೂ ಇಳಿಕೆ

administrator · Published

ICICI bank


New Delhi: ನಗರ ಪ್ರದೇಶಗಳಲ್ಲಿ ಸೇವಿಂಗ್ಸ್ ಅಕೌಂಟ್‌ಗಾಗಿ ಮಿನಿಮಮ್ ಬ್ಯಾಲನ್ಸ್ ಮೊದಲು 50,000 ರೂಗೆ ಏರಿಸಿದ್ದ ಐಸಿಐಸಿಐ ಬ್ಯಾಂಕ್, (ICICI bank) ಈಗ ಅದನ್ನು 15,000 ರೂಗೆ ಇಳಿಸಿದೆ. ಆಗಸ್ಟ್ 1ರಿಂದ ಹೊಸ ಖಾತೆ ತೆರೆಯುವವರು 10,000 ರೂ ಬದಲು 50,000 ರೂ ಇಡಬೇಕೆಂದು ನಿಯಮಿಸಿದ್ದರೂ, ಟೀಕೆಗಳ ನಂತರ ಇದನ್ನು ಪರಿಷ್ಕರಿಸಲಾಗಿದೆ.

“2025ರ ಆಗಸ್ಟ್ 1ರಿಂದ ಹೊಸ ಉಳಿತಾಯ ಖಾತೆಗಳಿಗೆ ಎಂಎಬಿ ನಿಯಮ ಜಾರಿಗೆ ತಂದಿದ್ದೇವೆ. ಗ್ರಾಹಕರ ಸಲಹೆಗಳನ್ನು ಗಮನಿಸಿ, ಅವರ ನಿರೀಕ್ಷೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಿದ್ದೇವೆ” ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.

ಹೊಸ ಮಿನಿಮಮ್ ಬ್ಯಾಲನ್ಸ್ ನಿಯಮಗಳು

  • ನಗರ ಪ್ರದೇಶ: 15,000 ರೂ
  • ಸೆಮಿ ಅರ್ಬನ್ / ಪಟ್ಟಣಗಳು: 7,500 ರೂ
  • ಗ್ರಾಮೀಣ ಭಾಗ: 2,500 ರೂ
  • ಕೊರತೆ ಇದ್ದರೆ 500 ರೂ ಅಥವಾ ಕೊರತೆಯ ಮೊತ್ತದ 6% ದಂಡ.

ಇತರ ಬ್ಯಾಂಕ್‌ಗಳ ಮಿನಿಮಮ್ ಬ್ಯಾಲನ್ಸ್

  • HDFC ಬ್ಯಾಂಕ್: 25,000 ರೂ (ಮೊದಲು 10,000 ರೂ)
  • HDFC ಫಸ್ಟ್ ಬ್ಯಾಂಕ್: 25,000 ರೂ
  • ಎಕ್ಸಿಸ್ ಬ್ಯಾಂಕ್: 12,000 ರೂ
  • ಬ್ಯಾಂಕ್ ಆಫ್ ಬರೋಡಾ: 2,000 ರೂ
  • ಎಸ್ಬಿಐ: ಶೂನ್ಯ ಬ್ಯಾಲನ್ಸ್ ಖಾತೆ

ಪ್ರತಿ ದಿನಾಂತ್ಯದಲ್ಲಿ ಖಾತೆಯಲ್ಲಿ ಇರುವ ಮೊತ್ತವನ್ನು ಸೇರಿಸಿ, ಆ ತಿಂಗಳ ದಿನಗಳ ಸಂಖ್ಯೆಯಿಂದ ಭಾಗಿಸಿದರೆ ಮಾಸಿಕ ಸರಾಸರಿ ಬ್ಯಾಲನ್ಸ್ ಸಿಗುತ್ತದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page