back to top
25.4 C
Bengaluru
Wednesday, July 23, 2025
HomeMoneyPhonePe ಮತ್ತು Google Pay ಬಳಕೆದಾರರಿಗೆ Income Tax ಇಲಾಖೆ ನಿಗಾ!

PhonePe ಮತ್ತು Google Pay ಬಳಕೆದಾರರಿಗೆ Income Tax ಇಲಾಖೆ ನಿಗಾ!

- Advertisement -
- Advertisement -

ದೇಶದಲ್ಲಿ ಡಿಜಿಟಲ್ ಪಾವತಿಗಳು (Digital payment) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬ್ಯಾಂಕ್ ಗಳಿಗೆ ಹೋಗದೆ ಸ್ಮಾರ್ಟ್ ಫೋನ್‌ ಮೂಲಕಲೇ ಹಣ ಪಾವತಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದಿನ ದಿನಗಳಲ್ಲಿ, ಬೇರೆಯವರ ಖಾತೆಗೆ ಹಣ ಜಮಾ ಮಾಡಲು ಬ್ಯಾಂಕ್‌ಗಳಿಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು, ಚೀಟಿ ತುಂಬಬೇಕಾಗುತ್ತಿದ್ದವು. ಆದರೆ ಈಗ, ಸೆಕೆಂಡುಗಳಲ್ಲಿ ಹಣವನ್ನು ಕಳುಹಿಸುವ ವ್ಯವಸ್ಥೆ ಬಂದಿದೆ.

ಈಗ ಹೆಚ್ಚಿನ ಡಿಜಿಟಲ್ ಪಾವತಿಗಳನ್ನು UPI ಮೂಲಕ ಮಾಡಲಾಗುತ್ತಿದೆ. GooglePay, PhonePe, Paytm ಮುಂತಾದ ಆಪ್‌ಗಳನ್ನು ಬಳಸುತ್ತೇವೆ. ಆದರೆ, UPI ಆಪ್‌ಗಳನ್ನು ಅತಿಯಾದ ಪ್ರಮಾಣದಲ್ಲಿ ಬಳಸಿದರೆ, ಹಣಕಾಸು ತಜ್ಞರ ಪ್ರಕಾರ, ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಇದೆ. ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ವ್ಯವಹಾರಗಳನ್ನು ಟ್ರ್ಯಾಕ್ ಮಾಡುತ್ತಿದೆ ಮತ್ತು UPI ಮೂಲಕ ಹೆಚ್ಚಿನ ಪಾವತಿಗಳನ್ನು ಮಾಡುವವರ ಮೇಲೆ ನಿಗಾ ಇರಿಸಿದೆ.

ಬ್ಯಾಂಕ್ ಖಾತೆಗಳಲ್ಲಿ ಮಿತಿಯನ್ನು ಮೀರಿ ನಗದು ಠೇವಣಿಯೆಚ್ಚು ಮಾಡಿದವರು, ಮತ್ತು ದೊಡ್ಡ ಮೊತ್ತದ ವ್ಯವಹಾರ ನಡೆಸಿದವರು, ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ, ತೆರಿಗೆ ಮತ್ತು ದಂಡಗಳನ್ನು ವಿಧಿಸುವುದರೊಂದಿಗೆ, ಅಧಿಕೃತವಾಗಿ ಅವರ ಮನೆಗೆ ನೋಟಿಸ್‌ಗಳು ಕಳುಹಿಸಬಹುದಾಗಿದೆ.

ಈ ಎಲ್ಲಾ ವಹಿವಾಟುಗಳನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಪರಿಶೀಲಿಸಲಾಗುತ್ತಿದೆ. ಸಾಮಾನ್ಯವಾಗಿ, ಒಂದು ವರ್ಷದೊಳಗೆ ಉಳಿತಾಯ ಖಾತೆಯಲ್ಲಿ ₹10 ಲಕ್ಷಕ್ಕೂ ಹೆಚ್ಚು ಠೇವಣಿಯಾಗಿದ್ರೆ, ಅವು ತಕ್ಷಣವೇ ಆದಾಯ ತೆರಿಗೆ ಇಲಾಖೆಗೆ ವರದಿಯಾಗುತ್ತವೆ.

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 285B ಅಡಿಯಲ್ಲಿ, ಬ್ಯಾಂಕ್ ಖಾತೆಗಳಲ್ಲಿ ಹಣ ಜಮಾ ಮಾಡುವ ಮೇಲೆ ನಿರ್ಬಂಧವಿದೆ. ಇದರ ಜೊತೆಗೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ, ಖಾತೆಯಲ್ಲಿ ಠೇವಣಿ ಮಾಡಿದ ಹಣದ ವಿವರಗಳು ನೋಟಿಸ್‌ಗಳನ್ನು ತರಲು ಕಾರಣವಾಗಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page