back to top
20.6 C
Bengaluru
Tuesday, July 15, 2025
HomeKarnatakaಕರ್ನಾಟಕದಲ್ಲಿ CM, Ministers, MLAs, ಶಾಸಕರ ವೇತನ ಶೇ 100 ರಷ್ಟು ಹೆಚ್ಚಳ

ಕರ್ನಾಟಕದಲ್ಲಿ CM, Ministers, MLAs, ಶಾಸಕರ ವೇತನ ಶೇ 100 ರಷ್ಟು ಹೆಚ್ಚಳ

- Advertisement -
- Advertisement -

Bengaluru: ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ, ಸಚಿವರು (CM, Ministers, MLAs) ಮತ್ತು ಶಾಸಕರ ವೇತನ ಶೇ 100 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, (increase the salary of the Chief Minister, Ministers and MLAs) ರಾಜ್ಯಪಾಲರು ಇದಕ್ಕೆ ಅನುಮೋದನೆ ನೀಡಿದ್ದಾರೆ. ಈ ಬಗ್ಗೆ ‘ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಹಾಗೂ ‘ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಅನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದೆ.

ಎಷ್ಟು ಹೆಚ್ಚಾಗಲಿದೆ ಸಿಎಂ, ಸಚಿವರ ವೇತನ?

  • ಮುಖ್ಯಮಂತ್ರಿಯವರ ವೇತನ ₹75,000 ರಿಂದ ₹1.5 ಲಕ್ಷಕ್ಕೆ
  • ಸಚಿವರ ವೇತನ ₹60,000 ರಿಂದ ₹1.25 ಲಕ್ಷಕ್ಕೆ
  • ಶಾಸಕರ ಹಾಗೂ ವಿಪಕ್ಷ ನಾಯಕರ ವೇತನ ₹40,000 ರಿಂದ ₹80,000ಕ್ಕೆ
  • ವಿಧಾನಸಭಾಧ್ಯಕ್ಷ ಮತ್ತು ಪರಿಷತ್ ಸಭಾಪತಿ ವೇತನ ₹75,000 ರಿಂದ ₹1.25 ಲಕ್ಷಕ್ಕೆ
  • ಸಚಿವರ ಮನೆ ಬಾಡಿಗೆ ಭತ್ಯೆ ₹2.50 ಲಕ್ಷಕ್ಕೆ ಏರಿಕೆ

ಈ ವೇತನ ಹೆಚ್ಚಳದಿಂದ ಸರ್ಕಾರಕ್ಕೆ ₹62 ಕೋಟಿ ಹೆಚ್ಚುವರಿ ಹೊರೆ ಉಂಟಾಗಲಿದೆ. 2022ರಲ್ಲಿ ಬಿಜೆಪಿ ಸರ್ಕಾರ ಶಾಸಕರ ವೇತನ ಪರಿಷ್ಕರಿಸಿತ್ತು. ಆದರೆ ಈಗ, ಕೇವಲ ಎರಡು ವರ್ಷದಲ್ಲೇ ಮತ್ತೊಮ್ಮೆ ವೇತನ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, “ಶಾಸಕರ ಹಾಗೂ ಸಚಿವರ ಖರ್ಚು ಹೆಚ್ಚಾಗಿದೆ. ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಬಳಲುತ್ತಿದ್ದರೆ, ಶಾಸಕರೂ ಅದಕ್ಕೆ ಹೊರತಲ್ಲ. ಈ ಕಾರಣಕ್ಕಾಗಿ ವೇತನ ಹೆಚ್ಚಳ ಶಿಫಾರಸು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page