Petrol & Diesel Prices ಹೆಚ್ಚಳದಿಂದ ಬೇಸತ್ತಿರುವ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಕೆಲವು ದಿನಗಳಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ (Petrol & Diesel Prices) ಕಡಿಮೆಯಾಗುವ ಸೂಚನೆ ಸಿಕ್ಕಿದೆ.
ಮಾರ್ಚ್ನಲ್ಲಿ 83-84 US ಡಾಲರ್ ಇದ್ದ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ (Crude Oil Prices ) ಸೆಪ್ಟೆಂಬರ್ನಲ್ಲಿ 74 US ಡಾಲರ್ ಗೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಕಡಿಮೆಯಾಗಬಹುದು ಎಂದು ICRA ಅಂದಾಜಿಸಿದೆ.
ಈ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾ ತೈಲ ಬೆಲೆ (Crude Oil Prices) ಬ್ಯಾರೆಲ್ಗೆ 84 ಡಾಲರ್ ಆಗಿರಲಿದೆ ಎಂದು 2024ರ ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಆದರೆ ಪ್ರಸ್ತುತ ಕಚ್ಚಾ ಬೆಲೆಗಳು ಇದಕ್ಕಿಂತಲೂ ಕೆಳಗಿಳಿದಿದ್ದು, ಈಗ ಬ್ಯಾರೆಲ್ಗೆ 70 ರಿಂದ 75 ಡಾಲರ್ ವ್ಯಾಪ್ತಿಯಲ್ಲಿ ಹೊಯ್ದಾಡುತ್ತಿವೆ.
ಇದೇ ವ್ಯಾಪ್ತಿಯಲ್ಲಿ ಬೆಲೆಗಳು ಸ್ಥಿರಗೊಂಡರೆ, ಈ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಭಾರತವು ಕಚ್ಚಾ ತೈಲ ಆಮದಿನಲ್ಲಿ ಗಣನೀಯ ಉಳಿತಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
70 ರಿಂದ 72 USD ಗೆ ಕಚ್ಚಾ ತೈಲ
“ಭಾರತ ಸರ್ಕಾರವು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ (Crude Oil Prices) 85 US ಡಾಲರ್ ಬೆಲೆಯನ್ನು ನಿಗದಿಪಡಿಸಿದೆ. ಆದರೆ ಪ್ರಸ್ತುತ ಬೆಲೆಗಳು 70 ರಿಂದ 72 US ಡಾಲರ್ಗೆ ಹತ್ತಿರದಲ್ಲಿವೆ.
ಇದು ಗಮನಾರ್ಹ ಲಾಭವನ್ನು ಸೂಚಿಸುತ್ತದೆ. 2025 ರಲ್ಲಿಯೂ ಕಚ್ಚಾ ತೈಲ ಬೆಲೆಗಳು (Crude Oil Prices) 80 ಡಾಲರ್ಗಿಂತ ಕಡಿಮೆ ಮಟ್ಟದಲ್ಲಿಯೇ ಇರಲಿವೆ ಎಂದು ನಿರೀಕ್ಷಿಸಲಾಗಿದೆ.
ಇದು ಮಾರ್ಚ್ 2025 ರವರೆಗೆ ಹೀಗೆಯೇ ಮುಂದುವರಿದರೆ ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಲಾಭವಾಗಲಿದೆ” ಎಂದು ಕೆಡಿಯಾ ಅಡ್ವೈಸರಿ (Kedia advisory) ನಿರ್ದೇಶಕ ಅಜಯ್ ಕೇಡಿಯಾ (Ajay Kedia) ANI ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹೇಳಿದರು.
October ನಲ್ಲಿ ಬೆಲೆ ಕಡಿತ
October 5 ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು (Petrol & Diesel Prices) ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಸಿಎಲ್ಎಸ್ಎ ತೈಲ ಕಾರ್ಯದರ್ಶಿ ಪಂಕಜ್ ಜೈನ್ (Pankaj Jain) ಹೇಳಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಮತದಾರರನ್ನು ಸೆಳೆಯುವ ಭಾಗವಾಗಿ, NDA ಸರ್ಕಾರ ತೈಲ ಬೆಲೆ ಇಳಿಕೆ ಬಗ್ಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.