Women’s World Cup 2025: ಮಹಿಳಾ ವಿಶ್ವಕಪ್ನಲ್ಲಿ ಇಂದು 10ನೇ ಪಂದ್ಯವು ನಡೆಯಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ (India-South Africa) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ವಿಶಾಖಪಟ್ಟಣಂನ ಡಾ. ವೈರಾಜ ಶೇಖರ್ ರೆಡ್ಡಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಈ ಮೈದಾನದಲ್ಲಿ 2014 ನಂತರ 10 ವರ್ಷಗಳ ನಂತರ ಮಹಿಳಾ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿದೆ.
ವಿಶ್ವಕಪ್ ನಲ್ಲಿ ಇವರೆಗೂ ಉಭಯ ತಂಡಗಳಿಗೆ ಇದು ಮೂರನೇ ಪಂದ್ಯ. ಭಾರತ ತನ್ನ ಮೊದಲು ಎರಡು ಪಂದ್ಯಗಳಲ್ಲಿ ಗೆದ್ದು ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಒಂದು ಗೆಲುವು, ಒಂದು ಸೋಲಿನೊಂದಿಗೆ ಐದನೇ ಸ್ಥಾನದಲ್ಲಿದೆ.
ಭಾರತವು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ 59 ರನ್ ಗಳ ಗೆಲುವು ಸಾಧಿಸಿ, ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧ 88 ರನ್ಗಳಿಂದ ಜಯಿಸಿ ತನ್ನ ಅಭಿಯಾನವನ್ನು ಶುರುಮಾಡಿದೆ. ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ ಸೋತರೂ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಚೇತರಿಸಿಕೊಂಡಿದೆ.
ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ಇದುವರೆಗೂ 32 ಪಂದ್ಯಗಳು ನಡೆದಿವೆ. ಭಾರತ 20 ಪಂದ್ಯಗಳಲ್ಲಿ ಗೆದ್ದು, 12 ಪಂದ್ಯಗಳಲ್ಲಿ ಸೋತಿದೆ. ಇಂದಿನ ಪಂದ್ಯಕ್ಕೆ ಫೆವರಿಟ್ ತಂಡವಾಗಿ ಭಾರತ ಪರಿಗಣಿಸಲಾಗಿದೆ.
ವಿಶಾಖಪಟ್ಟಣಂನಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಮುಂದಿನ 24 ಗಂಟೆಗಳೊಳಗೆ ಭಾರೀ ಮಳೆಯ ಸಾಧ್ಯತೆ ಇದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಪರಿಣಾಮವಾಗಿ, ಇಂದಿನ ಪಂದ್ಯಕ್ಕೆ ಮಳೆಯ ಅಡ್ಡಿ ಬರಬಹುದು.
ಮೈದಾನವು ಆರಂಭದಲ್ಲಿ ಬ್ಯಾಟಿಂಗ್‌ಗಾಗಿ ಅನುಕೂಲಕರವಾಗಿದ್ದು, ಆಟ ಮುಂದುವರಿದಂತೆ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 233, ಎರಡನೇ ಇನ್ನಿಂಗ್ಸ್ 205. ಈ ಮೈದಾನದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ತಂಡ 3 ಬಾರಿ ಮಾತ್ರ ಗೆದ್ದಿದೆ, ಚೇಸಿಂಗ್ ತಂಡಗಳು 10 ಬಾರಿ ಗೆದ್ದಿವೆ. ಹೈಸ್ಕೋರ್ 387/5, ಕಡಿಮೆ ಸ್ಕೋರ್ 76/10. ಟಾಸ್ ಗೆದ್ದ ತಂಡವು ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಇಂದಿನ ಪಂದ್ಯವು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗುತ್ತದೆ. ಜಿಯೋ ಹಾಟ್ಸ್ಟಾರ್‌ನಲ್ಲಿ ಕೂಡ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ಲಭ್ಯ.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗ್ಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ಸ್ನೇಹ ರಾಣಾ, ಶ್ರೀ ಚರಣಿ, ಕ್ರಾಂತಿ ಗೌಡ್.
ದಕ್ಷಿಣ ಆಫ್ರಿಕಾದ ಸಂಭಾವ್ಯ ಪ್ಲೇಯಿಂಗ್ XI: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ಸುನೆ ಲೂಸ್, ಮರಿಜಾನ್ನೆ ಕಪ್, ಅನ್ನೇರಿ ಡೆರ್ಕ್ಸೆನ್, ಸಿನಾಲೊ ಜಾಫ್ತಾ (ವಿಕೆಟ್ ಕೀಪರ್), ಕ್ಲೋಯ್ ಟ್ರಯಾನ್, ನಡಿನ್ ಡಿ ಕ್ಲರ್ಕ್, ಮಸಾಬಟಾ ಕ್ಲಾಸ್, ಅಯಾಬೊಂಗಾ ಖಾಕಾ, ನಾನ್ಕುಲುಲೆಕೊ ಮ್ಲಾಬಾ.