back to top
22 C
Bengaluru
Tuesday, July 22, 2025
HomeBusinessTurmeric Export ನಲ್ಲಿ ಭಾರತ ಗುರಿ: 2030ರೊಳಗೆ $1 ಬಿಲಿಯನ್ ಮೌಲ್ಯದ ರಫ್ತು ಯೋಜನೆ

Turmeric Export ನಲ್ಲಿ ಭಾರತ ಗುರಿ: 2030ರೊಳಗೆ $1 ಬಿಲಿಯನ್ ಮೌಲ್ಯದ ರಫ್ತು ಯೋಜನೆ

- Advertisement -
- Advertisement -

Nizamabad (Telangana): 2030ರ ವೇಳೆಗೆ $1 ಬಿಲಿಯನ್ ಮೌಲ್ಯದ ಅರಿಶಿಣವನ್ನು ರಫ್ತು (turmeric export) ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

“2023ರ ತೆಲಂಗಾಣ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅರಿಶಿಣ ಮಂಡಳಿ ಸ್ಥಾಪನೆಯ ಘೋಷಣೆ ನೀಡಿದ್ದರು. ಇದೀಗ ಅರಿಶಿಣ ಮಂಡಳಿ ರಚನೆಯಾಗಿದೆ. ಇದರಿಂದ ರೈತರು ಪ್ಯಾಕಿಂಗ್, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಹಾಗೂ ರಫ್ತು ಎಲ್ಲವನ್ನು  ಸರ್ಕಾರದ ಸಹಾಯದಿಂದ ನೇರವಾಗಿ ಮಾಡಬಹುದು. ರೈತರು ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ಲಾಭ ಗಳಿಸಬಹುದು” ಎಂದರು.

ಅರಿಶಿಣದ ಆರೋಗ್ಯ ಲಾಭಗಳ ಕುರಿತು ಅವರು ಹೇಳಿದರು. “ಅರಿಶಿಣದಲ್ಲಿ ವೈರಸ್ ವಿರುದ್ಧ, ಕ್ಯಾನ್ಸರ್ ವಿರುದ್ಧ ಹಾಗೂ ಉರಿಯೂತ ನಿವಾರಣೆಯ ಗುಣಗಳಿವೆ. ಆದ್ದರಿಂದ ಇದನ್ನು ಪ್ರಪಂಚದಲ್ಲಿ ಅದ್ಭುತ ಔಷಧೀಯ ಪದಾರ್ಥವೆಂದು ಪರಿಗಣಿಸಲಾಗುತ್ತಿದೆ.”

ಅಮಿತ್ ಶಾ ಅವರ ಪ್ರಕಾರ, ಭಾರತದಲ್ಲಿ ಬೆಳೆಯುವ ಅರಿಶಿಣದಲ್ಲಿ ಕರ್ಕ್ಯುಮಿನ್ ಅಂಶವು ಹೆಚ್ಚು ಇದೆ, ಇದು ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಕಂಡುಬರುವುದಕ್ಕಿಂತ ಉತ್ತಮವಾಗಿದೆ. ಸಾವಯವ ಅರಿಶಿಣ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದೂ ಅವರು ಹೇಳಿದರು.

“2030ರೊಳಗೆ $1 ಬಿಲಿಯನ್ ಮೌಲ್ಯದ ಅರಿಶಿಣ ರಫ್ತು ಮಾಡಲು ನಾವು ಉದ್ದೇಶಿಸಿಕೊಂಡಿದ್ದೇವೆ. ಈ ಗುರಿ ಸಾಧಿಸಲು ನಾವು ಸಿದ್ಧರಾಗಿದ್ದೇವೆ,” ಎಂದು ಶಾ ಹೇಳಿದರು. ನಿಜಾಮಾಬಾದ್‌ನ ಅರಿಶಿಣ ಮುಂಬರುವ ದಿನಗಳಲ್ಲಿ ವಿಶ್ವದ ಅನೇಕ ದೇಶಗಳಿಗೆ ರಫ್ತು ಆಗಲಿದೆ ಎಂದು ಅವರು ಭರವಸೆ ನೀಡಿದರು. ವಿಶ್ವ ಅರಿಶಿಣ ಉತ್ಪಾದನೆ, ಬಳಕೆ ಮತ್ತು ರಫ್ತಿನಲ್ಲಿ ಭಾರತ ಶೇ 62ಕ್ಕೂ ಹೆಚ್ಚು ಪಾಲು ಹೊಂದಿದೆ. 2023-24ರಲ್ಲಿ ಭಾರತ 1.62 ಲಕ್ಷ ಟನ್ ಅರಿಶಿಣ ಹಾಗೂ ಅದರ ಉತ್ಪನ್ನಗಳನ್ನು $226.5 ಮಿಲಿಯನ್ ಮೌಲ್ಯದಲ್ಲಿ ರಫ್ತು ಮಾಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page