back to top
20.4 C
Bengaluru
Tuesday, October 7, 2025
HomeNewsIndia vs England First Test: ಮೂರನೇ ಕ್ರಮಾಂಕದಲ್ಲಿ ಯಾರು? ಕರುಣ್ ನಾಯರ್ ಅಥವಾ ಸಾಯಿ...

India vs England First Test: ಮೂರನೇ ಕ್ರಮಾಂಕದಲ್ಲಿ ಯಾರು? ಕರುಣ್ ನಾಯರ್ ಅಥವಾ ಸಾಯಿ ಸುದರ್ಶನ್?

- Advertisement -
- Advertisement -

Bengaluru: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ (India vs England First Test) ಮೊದಲ ಪಂದ್ಯ ಇಂದು ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇಂಗ್ಲೆಂಡ್ ಈಗಾಗಲೇ ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದರೆ, ಭಾರತ ಇನ್ನೂ ತನ್ನ ಪ್ಲೇಯಿಂಗ್ ಎಲೆವನ್ ಘೋಷಿಸಿಲ್ಲ.

ವಿರಾಟ್ ಕೊಹ್ಲಿ ನಿವೃತ್ತಿಯ ನಂತರ, ನಾಯಕ ಶುಭ್ಮನ್ ಗಿಲ್ ಅವರು 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ದೃಢವಾಗಿದೆ. ಇದರಿಂದಾಗಿ ಮೂರನೇ ಕ್ರಮಾಂಕ ಖಾಲಿ ಆಗಿದ್ದು, ಈಗ ಎಲ್ಲರ ದೃಷ್ಟಿ ಅಲ್ಲಿ ಯಾರಿಗೆ ಅವಕಾಶ ಸಿಗುತ್ತೆ ಎಂಬುದರತ್ತ ಹರಿದಿದೆ.

ಈ ಹಿಂದೆ ಗಿಲ್ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ ಈ ಬದಲಾವಣೆಯಿಂದಾಗಿ ಈ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳಿದ್ದಾರೆ – ಸಾಯಿ ಸುದರ್ಶನ್ ಹಾಗೂ ಕರುಣ್ ನಾಯರ್.

23 ವರ್ಷದ ಸಾಯಿ ಸುದರ್ಶನ್ ಇತ್ತೀಚಿನ ದಿನಗಳಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ. ಐಪಿಎಲ್ 2025 ರಲ್ಲಿ ಅವರು 15 ಪಂದ್ಯಗಳಲ್ಲಿ 759 ರನ್ ಗಳಿಸಿದ್ದು, ಒಂದು ಶತಕ ಹಾಗೂ 6 ಅರ್ಧಶತಕಗಳು ಅವರ ಸಾಧನೆ. ಅವರ ಬ್ಯಾಟಿಂಗ್‌ ಶೈಲಿಯಿಂದ ತಂಡದಲ್ಲಿ ನಂಬಿಕೆಯನ್ನು ಉಂಟುಮಾಡಿದ್ದಾರೆ. ಜೊತೆಗೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1957 ರನ್ ಗಳಿಸಿದ್ದಾರೆ.

ಕರ್ನಾಟಕದ ಕರುಣ್ ನಾಯರ್ 2017 ರ ಬಳಿಕ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಮರುಪ್ರವೇಶ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಅವರು ಮುಂಚಿತದಲ್ಲಿ ತ್ರಿಶತಕ ಹೊಡೆದ ದಾಖಲೆ ಹೊಂದಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8470 ರನ್ ಗಳಿಸಿದ್ದು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3128 ರನ್ ಗಳಿದ್ದಾರೆ. ಅವರ ಅನುಭವ ಭಾರತಕ್ಕೆ ಒಳ್ಳೆಯ ಆಯ್ಕೆ ನೀಡಬಹುದು.

ಮೂರನೇ ಕ್ರಮಾಂಕಕ್ಕೆ ಕರುಣ್ ಅಥವಾ ಸುದರ್ಶನ್ ಎಂಬ ನಿರ್ಧಾರ ಟಾಸ್ ಸಮಯಕ್ಕೆ ಬಹುಶಃ ಬಹಿರಂಗವಾಗಬಹುದು. ಮೊದಲ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದಾರೆ ಎಂಬ ನಿರೀಕ್ಷೆಯಿದೆ. ತಂಡದ ಅಂತಿಮ ರೂಪ ಟಾಸ್ ನಂತರ ಗೊತ್ತಾಗುವುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page