Centurion, South Africa : ದಕ್ಷಿಣ ಆಫ್ರಿಕಾದ Centurion ನ SuperSport Park ನಲ್ಲಿ ಸೋಮವಾರ ನಡೆಯಬೇಕಿದ್ದ ಭಾರತ (India) ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ (Cricket Test Match) ಪಂದ್ಯದ ಎರಡನೇ ದಿನದಾಟವು ಭಾರಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿದೆ. ಬೆಳಿಗ್ಗೆಯಿಂದಲೇ ಮಳೆ ಶುರುವಾಗಿದ್ದರಿಂದ ಆಟಗಾರರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ.
ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡವು 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 272 ರನ್ ಗಳಿಸಿತು. ಶತಕ ಗಳಿಸಿದ್ದ ಕೆ.ಎಲ್. ರಾಹುಲ್ (KL Rahul) ಮತ್ತು ಅಜಿಂಕ್ಯ ರಹಾನೆ (Ajinkya Rahane) ಕ್ರೀಸ್‌ನಲ್ಲಿದ್ದರು. ಆದರೆ ಸೋಮವಾರ ಬೆಳಿಗ್ಗೆಯಿಂದಲೇ ಮಳೆ ಶುರುವಾಗಿದ್ದರಿಂದ ಆಟಗಾರರು ಕಣಕ್ಕಿಳಿಯಲಿಲ್ಲ. ಮಧ್ಯಾಹ್ನದವರೆಗೂ ಮುಂದುವರಿದ ಮಳೆಯಿಂದಾಗಿ ಪಿಚ್ ಗೆ ಹಾಕಿದ್ದ ಕವರ್ ಮೇಲೆ ಬಹಳಷ್ಟು ಪ್ರಮಾಣದಲ್ಲಿ ನೀರು ನಿಂತಿತ್ತು. ಈ ಅವಧಿಯಲ್ಲಿ ಎರಡು ಸಲ ಸ್ವಲ್ಪ ಹೊತ್ತು ಮಳೆ ನಿಂತಾಗ ಪಿಚ್ ಮತ್ತು ಹೊರಾಂಗಣದ ಸ್ಥಿತಿಗತಿಯನ್ನು ಅಂಪೈರ್‌ಗಳು ಪರಿಶೀಲಿಸಿದರು. ಮತ್ತೆ ಮಳೆ ಜೋರಾದ ಕಾರಣ ಅಂಪೈರ್ ಗಳು ದಿನದಾಟವನ್ನು ರದ್ದುಗೊಳ್ಳಿಸಿದರು.
Image : BCCI