ಭಾರತದ ಪ್ರಮುಖ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕ ಸ್ಟಡ್ಸ್ (STUDDS) ಹೊಸ ವೋಗ್ ಹೆಲ್ಮೆಟ್ ನ “ವೋಗ್ D1 ಸ್ಕ್ವೇರ್” ಗ್ರಾಫಿಕ್ ಸಿರೀಸ್ ಅನ್ನು ಬಿಡುಗಡೆ ಮಾಡಿದೆ. ಈ ಹೆಲ್ಮೆಟ್ (helmets) ಸುರಕ್ಷತೆ, ಸೌಕರ್ಯ ಮತ್ತು ಮೌಲ್ಯದ ಸಮತೋಲನಕ್ಕೆ ಪ್ರಸಿದ್ಧವಾಗಿದೆ. BIS ಸುರಕ್ಷತಾ ಮಾನದಂಡಗಳನ್ನು ಪೂರೈಸಿ ISI ಪ್ರಮಾಣೀಕರಣ ಹೊಂದಿದ್ದು, ಭಾರತೀಯ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ರಕ್ಷಣೆಯನ್ನು ನೀಡುತ್ತದೆ.
ಹೊಸ ವೋಗ್ D1 ಸ್ಕ್ವೇರ್ ಸರಣಿಯು 6 ಬಣ್ಣಗಳ ಗ್ರಾಫಿಕ್ ಆಯ್ಕೆಗಳಲ್ಲಿ ಲಭ್ಯವಿದ್ದು, ಎಲ್ಲಾ ರೀತಿಯ ಸವಾರರಿಗೆ ಸೂಕ್ತವಾಗಿದೆ. ನಿಯಂತ್ರಿತ ಸಾಂದ್ರತೆಯ EPS ಬಳಸಿ ತಯಾರಿಸಲಾಗಿದ್ದು, ವಿವಿಧ ಸವಾರಿ ಪರಿಸ್ಥಿತಿಗಳಲ್ಲಿ ರಕ್ಷಣೆಯನ್ನು ಖಚಿತಪಡಿಸುತ್ತದೆ. ಚಿನ್ ಸ್ಟ್ರಾಪ್ ತ್ವರಿತವಾಗಿ ತೆರೆದುಕೊಳ್ಳುವಂತೆ ವಿನ್ಯಾಸಗೊಂಡಿದ್ದು ಅನುಕೂಲತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ.
ಹೆಲ್ಮೆಟ್ ಹೈಪೋಲಾರ್ಜೆನಿಕ್ ಲೈನರ್ ಮತ್ತು ಟಾಪ್ ಏರ್ ಎಕ್ಸಾಸ್ಟ್ ಹೊಂದಿದ್ದು, ದೀರ್ಘಕಾಲದ ಬಳಕೆಯ ನಂತರವೂ ತಾಜಾತನ ಮತ್ತು ಸೌಕರ್ಯವನ್ನು ಕಾಪಾಡುತ್ತದೆ. ಭಾರತದಲ್ಲಿ ಬಿಸಿಲು ಮತ್ತು ತಾಪಮಾನಕ್ಕೆ ಸೂಕ್ತವಾಗಿದೆ. XS, S, M, L ಎಂಬ 4 ಘಾತ್ರಗಳಲ್ಲಿ ಲಭ್ಯವಿದ್ದು, ಬಣ್ಣ ಆಯ್ಕೆಗಳು ಬ್ಲಾಕ್ & ಬ್ಲೂ, ಬ್ಲಾಕ್ & ವೈಟ್, ಬ್ಲಾಕ್ & ರೆಡ್, ಬ್ಲಾಕ್ & ರೋಸ್, ಬ್ಲಾಕ್ & ಗ್ರೇ ಸೇರಿವೆ.
ಹೆಲ್ಮೆಟ್ ರೂ. 1,095 ರಿಂದ ಪ್ರಾರಂಭವಾಗುತ್ತಿದ್ದು, offline ಅಂಗಡಿಗಳು, ಸ್ಟಡ್ಸ್ outlet ಗಳು ಮತ್ತು ಅಧಿಕೃತ website ಮೂಲಕ ಖರೀದಿಸಬಹುದು. ಪ್ರಮುಖ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಸ್ಟಡ್ಸ್ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಭೂಷಣ್ ಖುರಾನಾ ಹೇಳಿದ್ದಾರೆ, “ಸವಾರರ ಶೈಲಿ ಮತ್ತು ಆದ್ಯತೆಗಳಿಗೆ ಅನುಗುಣವಾಗಿ, ಸುರಕ್ಷತೆ ಮತ್ತು ಸೌಕರ್ಯವನ್ನು ಒದಗಿಸುವಂತೆ ನಮ್ಮ ಉತ್ಪನ್ನಗಳನ್ನು ನಿರಂತರವಾಗಿ ವಿಕಸಿಸುತ್ತಿದ್ದೇವೆ. ಹೊಸ ಗ್ರಾಫಿಕ್ ಡಿಸೈನ್‌ಗಳೊಂದಿಗೆ ವೋಗ್ ಸಿರೀಸ್ ಸವಾರರಿಗೆ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಆಕರ್ಷಕ ಉತ್ಪನ್ನವನ್ನು ನೀಡಲು ಸಹಾಯ ಮಾಡುತ್ತದೆ. ಪುರುಷರು ಮತ್ತು ಮಹಿಳೆಯರಿಗಾಗಿ ವಿನ್ಯಾಸಗೊಳಿಸಿದ ಹಗುರವಾದ ತೆರೆದ ಮುಖದ ಹೆಲ್ಮೆಟ್, ಆಧುನಿಕ ವಿನ್ಯಾಸವನ್ನು ವಿಶ್ವಾಸಾರ್ಹ ರಕ್ಷಣೆಯೊಂದಿಗೆ ಸಂಯೋಜಿಸುತ್ತದೆ.”