‘ಲಾಪತಾ ಲೇಡಿಸ್’ (Laapataa Ladies) ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ Oscars Award ಗೆ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್ನಲ್ಲಿ ‘ಭಾರತ ಫಿಲ್ಮ್ ಫೆಡರೇಷನ್’ (Film Federation of India (FFI) ಸದಸ್ಯರು ಈ ಘೋಷಣೆ ಮಾಡಿದ್ದಾರೆ. 2025 ಮಾರ್ಚ್ ನಲ್ಲಿ ನಡೆಯುವ 97ನೇ ಸಾಲಿನ ‘ಆಸ್ಕರ್’ ಅಕಾಡೆಮಿ ಅವಾರ್ಡ್ಸ್ (Academy Award) ಗೆ ಲಾಪತಾ ಲೇಡಿಸ್’ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ.
ಇತ್ತೀಚೆಗೆ ಬಾಲಿವುಡ್ನಲ್ಲಿ ಸ್ವಲ್ಪ ಸೌಂಡ್ ಮಾಡಿದ ಸಿನಿಮಾ ಎಂದರೆ ಅದು ಲಾಪತಾ ಲೇಡಿಸ್. ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್ನಲ್ಲಿ ಚಂದದ ಕಥೆಯ ಸಿಂಪಲ್ ಸಿನಿಮಾ ಒಂದು ರಿಲೀಸ್ ಆಗಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತು, ಆ ಸಿನಿಮಾ ಬೇರೆ ಯಾವುದೂ ಅಲ್ಲ, ಲಾಪತಾ ಲೇಡಿಸ್.
ಅಮೀರ್ ಖಾನ್ ಅವರ ಎರಡನೇ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ (Kiran Rao) ಅವರ ನಿರ್ದೇಶನದ ಈ ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸಿತು. ಲಾಪತಾ ಲೇಡೀಸ್’ ನೆಟ್ಫ್ಲಿಕ್ಸ್ (Netflix) ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಲಾಪತಾ ಲೇಡಿಸ್’ ಸಿನಿಮಾ (Laapataa Ladies Movie) ಮಹಿಳೆಯರ ಸಬಲೀಕರಣದ ಬಗ್ಗೆ ಇದೆ. ಈ ಸಿನಿಮಾ 2001ರಲ್ಲಿ ನಡೆಯುವ ಗ್ರಾಮೀಣ ಭಾರತದ ಕಥೆಯನ್ನು ಹೊಂದಿದೆ. ಎರಡು ನವ ವಿವಾಹಿತರ ಕಥೆಯನ್ನು ಹೊಂದಿದೆ. ರೈಲ್ವೆ ಪ್ರಯಾಣದಲ್ಲಿ ವಧುವಿಬ್ಬರೂ ಬದಲಾಗುತ್ತಾರೆ. ಆ ಬಳಿಕ ಅನೇಕರ ಕಣ್ಣು ತೆಗೆಸುವ ಕೆಲಸವನ್ನು ಮಾಡುತ್ತದೆ.
ಈ ಸಿನಿಮಾದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ. ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ (Oscars) ಗೆಲ್ಲಬೇಕು ಎಂಬುದು ಕಿರಣ್ ರಾವ್ ಅವರ ಕನಸಾಗಿದೆ. ಈ ಕನಸಿನ ಒಂದು ಹಂತವನ್ನು ಅವರು ಏರಿದ್ದಾರೆ.