Bengaluru: ಭಾರತೀಯ ರೈಲ್ವೆ (Indian Railways) ಮುಂದಿನ ಎರಡು ವರ್ಷಗಳಲ್ಲಿ 6 ಸಾವಿರ ಜನರಲ್ ಕ್ಲಾಸ್ ಬೋಗಿಗಳು ಸೇರಿದಂತೆ ಒಟ್ಟು 10 ಸಾವಿರ ಹೊಸ non-AC ಬೋಗಿಗಳನ್ನು ಅಳವಡಿಸಲು ಯೋಜಿಸಿದೆ. ಈ ನಿರ್ಧಾರದಿಂದ ಪ್ರಯಾಣಿಕರಿಗೆ ಇನ್ನಷ್ಟು ಸೀಟುಗಳ ಲಭ್ಯತೆ ಹೆಚ್ಚಲಿದೆ.
ಕೆಲವೆಡೆ ರೈಲು ಟಿಕೆಟ್ ಕಡಿಮೆ ಸಮಯದಲ್ಲಿ ದೊರಕುವುದು ಕಷ್ಟವಾಗುತ್ತಿತ್ತು. ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದರಿಂದ ಈಗ 370 ಹೊಸ ಟ್ರೇನ್‌ಗಳನ್ನು ರೆಗ್ಯುಲರ್ ಶ್ರೇಣಿಯಲ್ಲಿ ಸೇರಿಸಲಾಗುತ್ತಿದೆ. ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚು ಜನರಲ್ ಮತ್ತು ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ದಿನ 8 ಲಕ್ಷ ಪ್ರಯಾಣಿಕರಿಗೆ ಹೆಚ್ಚುವರಿ ಸೀಟುಗಳ ಲಭ್ಯತೆ ಹೆಚ್ಚಲಿದೆ.
ಇದೇ ಸಮಯದಲ್ಲಿ ಈಶಾನ್ಯ ಗಡಿ ರೈಲ್ವೆಗೂ ಸಾಕಷ್ಟು ಹೆಚ್ಚುವರಿ ಕೋಚ್‌ಗಳು, ರೈಲುಗಳು ದೊರಕಲಿವೆ ಎಂದು ಅವರು ಹೇಳಿದ್ದಾರೆ. “ಈ ವರ್ಷ ಜುಲೈನಿಂದ ಅಕ್ಟೋಬರ್‌ವರಗೆ ಈಶಾನ್ಯ ಗಡಿ ರೈಲ್ವೆ ವಿಭಾಗಕ್ಕೆ 370ನ ಹೊಸ ರೈಲುಗಳು ಸೇರ್ಪಡೆಯಾಗಿವೆ” ಎಂದು ಸಿಪಿಆರ್‌ಒ ಕಪಿಲ್ ಕಿಶೋರ್ ಶರ್ಮಾ ಮಾಹಿತಿ ನೀಡಿದ್ದಾರೆ.
ಈ ಯೋಜನೆಯಿಂದ ಹೆಚ್ಚಿನ ಪ್ರಯಾಣಿಕರು ಅನುಕೂಲವಾಗುವ ನಿರೀಕ್ಷೆ ಇದೆ, ಹಾಗೂ ರೈಲು ಸೇವೆಗಳ ಗುಣಮಟ್ಟವೂ ಉತ್ತಮವಾಗಲಿದೆ.