Delhi: ಅಮೆರಿಕವು (US) ಸತತ 2ನೇ ವರ್ಷವೂ 10 ಲಕ್ಷಕ್ಕೂ ಹೆಚ್ಚು ವಲಸೆರಹಿತ ಮತ್ತು ಪ್ರವಾಸಿ ವೀಸಾಗಳನ್ನು ಭಾರತೀಯರಿಗೆ ವಿತರಿಸಿದೆ. ಈ ಸಾಧನೆಯ ಮೂಲಕ ಅಮೆರಿಕ ಹೊಸ ದಾಖಲೆ ಸೃಷ್ಟಿಸಿದೆ.
2024ರಲ್ಲಿ ಅಮೆರಿಕಕ್ಕೆ 3,31,000 ಭಾರತೀಯ ವಿದ್ಯಾರ್ಥಿಗಳು ತೆರಳಿದ್ದು, ಇದು 2008-2009ರ ನಂತರದ ಅತ್ಯಧಿಕ ಸಂಖ್ಯೆಯಾಗಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ.
ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪದವಿ ಪಡೆದ ಭಾರತೀಯರ ಸಂಖ್ಯೆಯಲ್ಲಿ ಕಳೆದ 2 ವರ್ಷಗಳಲ್ಲಿ ಶೇ.19ರಷ್ಟು ಏರಿಕೆ ಕಂಡು, 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಹಿಂದಿನ 4 ವರ್ಷಗಳಿಂದ ಪ್ರವಾಸ, ಉದ್ಯಮ, ಶಿಕ್ಷಣ ಮುಂತಾದ ಉದ್ದೇಶಗಳಿಗೆ ಅಮೆರಿಕಕ್ಕೆ ತೆರಳುವ ಭಾರತೀಯರ ಸಂಖ್ಯೆಯಲ್ಲಿ 5 ಪಟ್ಟು ಏರಿಕೆಯಾಗಿದ್ದು, 2024ರ ಆರಂಭದಿಂದ 11 ತಿಂಗಳಲ್ಲಿ ಶೇ.26ರಷ್ಟು ಹೆಚ್ಚಾಗಿದೆ.
ಪ್ರಸ್ತುತ, 50 ಲಕ್ಷಕ್ಕೂ ಹೆಚ್ಚು ಭಾರತೀಯರ ಬಳಿ ಅಮೆರಿಕದ ವಲಸೆರಹಿತ ವೀಸಾ ಇದ್ದು, ಪ್ರತಿ ದಿನ ಸುಮಾರು 1000 ಮಂದಿಗೆ ಹೊಸ ವೀಸಾಗಳನ್ನು ವಿತರಿಸಲಾಗುತ್ತಿದೆ ಎಂದು ಭಾರತದಲ್ಲಿರುವ ಅಮೆರಿಕದ ದೂತಾವಾಸ ತಿಳಿಸಿದೆ.