
Bengaluru: ಭಾರತದ ಇ-ತ್ಯಾಜ್ಯವು (Electronic waste) ಆರ್ಥಿಕ ಲಾಭದ ಒಂದು ಮಹತ್ತರ ಅವಕಾಶವನ್ನು ಹೊಂದಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಭಾರತದಲ್ಲಿ ಉತ್ಪಾದನೆಯಾಗುವ ಇ-ತ್ಯಾಜ್ಯದಿಂದ ಲೋಹ ಮತ್ತು ಇತರ ವಸ್ತುಗಳಿಂದ $6 ಬಿಲಿಯನ್ ಮೌಲ್ಯದ ವಹಿವಾಟು ನಡೆಯಬಹುದು ಎಂದು ವರದಿ ಹೇಳಿದೆ.
China ಮತ್ತು US ನಂತರ ಭಾರತವು ಪ್ರಪಂಚದಲ್ಲಿ ಮೂರನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕ ರಾಷ್ಟ್ರವಾಗಿದೆ. 2014 ರಲ್ಲಿ 2 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸಿದ ಭಾರತ, 2024 ರಲ್ಲಿ 3.8 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸುವ ನಿರೀಕ್ಷೆ ಹೊಂದಿದೆ.
2024 ರಲ್ಲಿ ಉತ್ಪಾದನೆಯಾದ ಇ-ತ್ಯಾಜ್ಯದ 70% ಭಾಗವು ಮನೆಗಳು ಮತ್ತು ವ್ಯವಹಾರಗಳಿಂದ ಬರುತ್ತದೆ. ಜನರು ವಸ್ತುಗಳನ್ನು ಬೇಗ ಬದಲಾಯಿಸುತ್ತಿರುವುದರಿಂದ ಇ-ತ್ಯಾಜ್ಯ ಉತ್ಪಾದನೆ ಹೆಚ್ಚಾಗುತ್ತಿದೆ. ಇದು ಉತ್ತಮ ಮರುಬಳಕೆ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಹೊರಹಾಕುತ್ತದೆ.
“ಇ-ತ್ಯಾಜ್ಯದಿಂದ ಲೋಹಗಳ ಮೌಲ್ಯವು ಹೆಚ್ಚಾಗುತ್ತಿದ್ದು, ಭಾರತಕ್ಕೆ ಸುಸ್ಥಿರ ಲೋಹ ಹೊರತೆಗೆಯುವಿಕೆಯಲ್ಲಿ ಮುಂಚೂಣಿಗೆ ಬರುವ ಅವಕಾಶವಿದೆ” ಎಂದು ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ನ ಪಾಲುದಾರ ಜಸ್ ಬೀರ್ ಎಸ್ ಜುನೇಜಾ ಹೇಳಿದರು.
ಪ್ರಸ್ತುತ, ಭಾರತದಲ್ಲಿ ಕೇವಲ 16% ಗ್ರಾಹಕ ಇ-ತ್ಯಾಜ್ಯವನ್ನು ಔಪಚಾರಿಕವಾಗಿ ಸಂಸ್ಕರಿಸುತ್ತಿದ್ದಾರೆ. 2035 ರ ವೇಳೆಗೆ, ಶೇಕಡಾ 40 ರಷ್ಟು ಇ-ತ್ಯಾಜ್ಯವನ್ನು ಮಾತ್ರ ಮರುಬಳಕೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.