
ದುಬೈ ಉಪಪ್ರಧಾನಿ ಮತ್ತು ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಮಂಗಳವಾರ ಭಾರತಕ್ಕೆ ಆಗಮಿಸಿದರು. ಈ ಭೇಟಿಯಲ್ಲಿ ಭಾರತ ಮತ್ತು ದುಬೈ ನಡುವಿನ ಸಂಬಂಧಗಳನ್ನು (India-Dubai new cooperation) ಬಲಪಡಿಸುವ ಉದ್ದೇಶದಿಂದ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
- ದುಬೈನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಅಹಮದಾಬಾದ್ ಮತ್ತು ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ (IIFT) ಕ್ಯಾಂಪಸ್ ಸ್ಥಾಪನೆಗೆ ಘೋಷಣೆ ನೀಡಲಾಗಿದೆ.
- ಕೊಚ್ಚಿ ಮತ್ತು ವಡಿನಾರ್ನಲ್ಲಿ ಹಡಗು ದುರಸ್ತಿ ಕ್ಲಸ್ಟರ್‌ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ.
- ಗಲ್ಫ್ ನಗರದಲ್ಲಿ ಭಾರತ-ಯುಎಇ ಸ್ನೇಹ ಆಸ್ಪತ್ರೆ ಕಟ್ಟಲು ಭೂಮಿ ಹಂಚಲಾಗಿದೆ.
- ಭಾರತ್ ಮಾರ್ಟ್ ನಿರ್ಮಾಣಕ್ಕೆ ಮತ್ತು ಅದರ 3ಡಿ ರೆಂಡರಿಂಗ್ ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಜೊತೆ ದುಬೈ ರಾಜಕುಮಾರ ಪ್ರತ್ಯೇಕ ಸಭೆ ನಡೆಸಿದರು. ಈ ಸಭೆಗಳ ನಂತರ ಇವುಗಳ ಘೋಷಣೆಗಳು ನಡೆದವು.
ಸಭೆಯಲ್ಲಿ ಶೇಖ್ ಹಮ್ದಾನ್ ಅವರು ತಮ್ಮ ಅಜ್ಜ ಶೇಖ್ ರಶೀದ್ ಅವರ ಬಿಶ್ತ್ ಅನ್ನು ಉಡುಗೊರೆಯಾಗಿ ಪ್ರಧಾನಿ ಮೋದಿಗೆ ನೀಡಿದರು. ಇದು ಭಾರತ-ಯುಎಇ ನಡುವಿನ ಐತಿಹಾಸಿಕ ಸ್ನೇಹವನ್ನು ಪ್ರತಿಬಿಂಬಿಸುತ್ತದೆ.
ಈ ಹೊಸ ಯೋಜನೆಗಳು ಎರಡೂ ದೇಶಗಳ ಮಧ್ಯೆ 97 ಬಿಲಿಯನ್ ಡಾಲರ್‌ಗಳ ವ್ಯಾಪಾರವನ್ನು ಇನ್ನಷ್ಟು ಉತ್ತೇಜಿಸಲಿದೆ ಮತ್ತು ತೈಲೇತರ ವ್ಯಾಪಾರದ ಗುರಿಯಾದ 100 ಬಿಲಿಯನ್ ಡಾಲರ್ ಅನ್ನು ತಲುಪಲು ಸಹಾಯ ಮಾಡಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.