Search
WhatsApp alerts

Home › Business

ಭಾರತದ ಆರ್ಥಿಕ ಬೆಳವಣಿಗೆ ಅಪರೂಪವಾದದ್ದು: Walmart CEO McMillon ಪ್ರಶಂಸೆ

administrator · Published

Walmart CEO Doug McMillon

ನ್ಯೂಯಾರ್ಕ್ ಮೂಲದ ಖ್ಯಾತ ರೀಟೇಲ್ ಕಂಪನಿ Walmart ನ ಗ್ಲೋಬಲ್ ಸಿಇಒ ಮತ್ತು ಅಧ್ಯಕ್ಷ ಡೌಗ್ ಮೆಕ್ಮಿಲನ್ (Walmart CEO Doug McMillon) ಅವರು ಭಾರತದ ಆರ್ಥಿಕ ಪ್ರಗತಿಯನ್ನು ಮೆಚ್ಚಿದ್ದಾರೆ. ಅವರು “ಇಷ್ಟು ದೊಡ್ಡ ಆರ್ಥಿಕತೆ ಇಷ್ಟು ವೇಗದಲ್ಲಿ ಬೆಳೆಯುವುದು ಅತ್ಯಂತ ಅಪರೂಪ” ಎಂದು ಹೇಳಿದ್ದಾರೆ.

McMillon ಅವರ ಪ್ರಕಾರ, Walmart ಭಾರತದಲ್ಲಿ ಫ್ಲಿಪ್ಕಾರ್ಟ್ ಮತ್ತು ಫೋನ್ಪೇ ಸಂಸ್ಥೆಗಳನ್ನು ಖರೀದಿ ಮಾಡಿದ ಬಳಿಕ, ಇಲ್ಲಿ ನಾನಾ ರೀತಿಯಲ್ಲಿ ಕಲಿತಿದೆ. ಈ ದೇಶದಿಂದ ವಾಲ್ಮಾರ್ಟ್ ವರ್ಷಕ್ಕೆ 10 ಬಿಲಿಯನ್ ಡಾಲರ್ ಆದಾಯ ಗಳಿಸುವ ಗುರಿ ಹೊಂದಿದೆ.

ಭಾರತದ ಪ್ರವಾಸದ ಅನುಭವವನ್ನು ಹಂಚಿಕೊಂಡ McMillon, “ಇಲ್ಲಿ ಏನು ನಡೆಯುತ್ತಿದೆ ಎಂಬುದು ಒಮ್ಮೆ ಬಂದು ನೋಡಿದರೆ ಗೊತ್ತಾಗುತ್ತದೆ. ನಾನು ಭಾರತಕ್ಕೆ ಹಲವು ಬಾರಿ ಬಂದಿದ್ದೇನೆ. ಭಾರತೀಯ ಆರ್ಥಿಕತೆ ಹೇಗೆ ಬೆಳೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ,” ಎಂದು ಹೇಳಿದರು.

ಅವರು ಮುಂದಾಗಿ, “ಭಾರತದಲ್ಲಿ ಉದ್ಯಮಶೀಲತೆ ಜೋರಾಗಿದೆ. ಈ ಮಟ್ಟದ ಆರ್ಥಿಕತೆಯು ಇಂತಹ ವೇಗದಲ್ಲಿ ಬೆಳೆಯುವುದು, ಇದು ಬಹಳ ಅಪರೂಪ. ಇದರೊಂದಿಗೆ ಅನೇಕ ಹೊಸ ಅವಕಾಶಗಳೂ ಮೂಡುತ್ತಿವೆ,” ಎಂದು ಅಭಿಪ್ರಾಯಪಟ್ಟರು.

ಫ್ಲಿಪ್ಕಾರ್ಟ್ ಮತ್ತು ಫೋನ್ಪೇನಿಂದ Walmart ನಾವೀನ್ಯತೆ, ಗ್ರಾಹಕರಿಗೆ ವೇಗವಾಗಿ ಸೇವೆ ನೀಡುವುದು, ಇಕಾಮರ್ಸ್ ಮಾರುಕಟ್ಟೆ ಅಭಿವೃದ್ಧಿಪಡಿಸುವುದು ಹೀಗೆ ಅನೇಕ ವಿಷಯಗಳನ್ನು ಕಲಿತಿದೆ ಎಂದಿದ್ದಾರೆ.

McMillon ಹಳೆಯ ಕಾಲದ ಬಗ್ಗೆ ನೆನೆಸುತ್ತಾ, “ಪ್ರಾರಂಭದಲ್ಲಿ ನಾವು ಭಾರತದಿಂದ ಉತ್ಪನ್ನಗಳನ್ನು ಮಾತ್ರ ಆಮದು ಮಾಡುತ್ತಿದ್ದೆವು. ಈಗ ನಮ್ಮ ವ್ಯವಹಾರ ಸಾಕಷ್ಟು ವಿಸ್ತಾರವಾಗಿದೆ. ವರ್ಷಕ್ಕೆ 10 ಬಿಲಿಯನ್ ಡಾಲರ್ ಗಳಿಸುವ ಗುರಿಯನ್ನು ನಿಗದಿಪಡಿಸಿದ್ದೇವೆ. ಇದೊಂದು ದೊಡ್ಡ ಗುರಿ, ಆದರೆ ನಾವು ಅದನ್ನು ಸಾಧಿಸಲು ಕಠಿಣವಾಗಿ ಕೆಲಸ ಮಾಡುತ್ತಿದ್ದೇವೆ,” ಎಂದು ಹೇಳಿದರು.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page

Exit mobile version