ಅಮೆರಿಕ ಮೂಲದ ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್, (Jim Rogers) ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ನಾಯಕತ್ವದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಉತ್ತಮ ನಿರ್ವಹಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅವರು ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ನಡೆದ ಬದಲಾವಣೆಗಳನ್ನು ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಜಿಮ್ ರೋಜರ್ಸ್ ಅವರು ಹೇಳಿದ್ದಾರೆ, “ಮೋದಿ ಅವರು ಸಾಕಷ್ಟು ಒಳ್ಳೆಯ ವಿಚಾರಗಳನ್ನು ಮಾತನಾಡಿದ್ದಾರೆ, ಮತ್ತು ಅವರು ಕೆಲ ಉತ್ಕೃಷ್ಟ ಕೆಲಸಗಳನ್ನು ಮಾಡಿದ್ದಾರೆ.” ಅವರು ಆರ್ಥಿಕ ನೀತಿ ಮತ್ತು ಧೋರಣೆಗಳಲ್ಲಿ ಇತ್ತೀಚೆಗೆ ನಡೆದ ಪ್ರಮುಖ ಬದಲಾವಣೆಗಳನ್ನು ಗುರುತಿಸಿದ್ದಾರೆ.
ಅವರ ಪ್ರಕಾರ, ಹಲವು ದಶಕಗಳಿಂದ ಭಾರತದಲ್ಲಿ ಸರ್ಕಾರಗಳು ಉತ್ತಮ ಯೋಜನೆಗಳನ್ನು ಸೂಚಿಸಿತ್ತಿದ್ದರೂ, ಅವುಗಳನ್ನು ಕಾರ್ಯನಿರ್ವಹಣೆಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಮೋದಿಯವರ ಆಡಳಿತದಲ್ಲಿ ಈ ಬದಲಾವಣೆಗಳನ್ನು ನೋಡಿದ ಮೇಲೆ ‘ಭಾರತಕ್ಕೆ ಆರ್ಥಿಕತೆ ಅರ್ಥ ಆಗುತ್ತದೆ, ಹೇಳಿದ್ದನ್ನು ಮಾಡಿ ತೋರಿಸುತ್ತದೆ ಎಂದು ನನ್ನ ಜೀವನದಲ್ಲಿ ಮೊದಲ ಬಾರಿಗೆ ಅನಿಸುತ್ತಿದೆ. ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಯ ಕಾರ್ಯತಂತ್ರಗಳ ಬಗ್ಗೆ ಭಾರತಕ್ಕಿರುವ ಬದ್ಧತೆ ಬಗ್ಗೆ ಆತ್ಮವಿಶ್ವಾಸ ಮೂಡಿದೆ’ಎಂದು ರೋಜರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಗೋಚರವಾಗಿರುವ ಸುಧಾರಣೆಗಳಾದ ಜಿಎಸ್ಟಿ, ದಿವಾಳಿ ತಡೆ ಸಂಹಿತೆ (ಐಬಿಸಿ), ಪಿಎಲ್ಐ ಸ್ಕೀಮ್, ಸ್ಟಾರ್ಟಪ್ ಫಂಡಿಂಗ್ ಸೇರಿದಂತೆ, ಹಲವು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.