New York: ಮೂರು ದಿನಗಳ ಅಮೆರಿಕ (USA) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಈ ವೇಳೆ ನ್ಯೂಯಾರ್ಕ್ನಲ್ಲಿ (New York) ಅಮೆರಿಕನ್ ಟೆಕ್ ಸೆಕ್ಟರ್ ಕಂಪನಿಗಳ 15 ಸಿಇಒ (CEO) ಗಳೊಂದಿಗೆ ಸಭೆ ನಡೆಸಿದರು. ಬೆಳೆಯುತ್ತಿರುವ ಮಾರುಕಟ್ಟೆ, ಪ್ರತಿಭಾನ್ವಿತ ಸಂಪನ್ಮೂಲಗಳ ಲಭ್ಯತೆ ಮತ್ತು ಪ್ರಜಾತಾಂತ್ರಿಕ ಚೌಕಟ್ಟು ಈ ಮೂರು ಸಮ್ಮಿಶ್ರಣ ಇರುವ ಅಪೂರ್ವ ವಾತಾವರಣ ಭಾರತದ್ದಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
”ಜಾಗತಿಕವಾಗಿ ಅತಿ ಹಳೆಯ ಪ್ರಜಾಪ್ರಭುತ್ವ ದೇಶವಾದ ಅಮೆರಿಕ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಜತೆಯಾಗಿವೆ. ಎ.ಐ ಎಂದರೆ ಕೃತಕ ಬುದ್ಧಿಮತ್ತೆ ಅಲ್ಲ, ಎಐ ಅಮೆರಿಕನ್ನರು-ಭಾರತೀಯರು ಹೊಂದಿರುವ ಸ್ಫೂರ್ತಿ ಚಿಲುಮೆಯಾಗಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Tech CEO ಗಳ ಜೊತೆ ಸಭೆ
ಲಾಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್ನಲ್ಲಿ (Lotte New York Palace Hotel) ಮೋದಿ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡ 15 CEO ಗಳಲ್ಲಿ ಗೂಗಲ್ನ (Google CEO) ಸುಂದರ್ ಪಿಚೈ, (Sundar Pichai) ಎನ್ವಿಡಿಯಾದ ಜೆನ್ಸೆನ್ ಹುವಾಂಗ್ ಕೂಡ ಇದ್ದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial intelligence), ಕ್ವಾಂಟಂ (quantum) ಟೆಕ್ನಾಲಜಿ, ಬಯೋಟೆಕ್ನಾಲಜಿ,(biotechnology) ಲೈಫ್ ಸೈನ್ಸ್, ಐಟಿ ಮತ್ತು ಕಮ್ಯುನಿಕೇಶನ್ಸ್, ಸೆಮಿಕಂಡ್ಟರ್ ಟೆಕ್ನಾಲಜಿ ಮೊದಲದ ಪ್ರಮುಖ ಕ್ಷೇತ್ರಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳಾದವು. ನರೇಂದ್ರ ಮೋದಿ ಸೆಮಿಕಂಡಕ್ಟರ್ ವಲಯದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದರು.
ನೀವೆಲ್ಲಾ ಭಾರತ ಹಾಗೂ ಇತರ ಜಾಗತಿಕ ಪಾಲುದಾರರ ಜೊತೆ ಕೆಲಸ ಮಾಡಿದ್ದೀರಿ. ಭಾರತ ಹಾಗೂ ಇತರ ದೇಶಗಳನ್ನು ನೀವು ಹೋಲಿಕೆ ಮಾಡಿ ನೋಡಬಹುದು… ಯಾವುದೇ ದೇಶವಾದರೂ ರಾಜಕೀಯ ಸ್ಥಿರತೆ ಬಹಳ ಮುಖ್ಯ. ಈ ವಿಚಾರದಲ್ಲಿ ಭಾರತ ಮೇಲುಗೈ ಹೊಂದಿದೆ,’ ಎಂದು ಮೋದಿ ಈ ಟೆಕ್ ಸಿಇಒಗಳ ಸಭೆಯಲ್ಲಿ ತಿಳಿಸಿದರು.