back to top
26.4 C
Bengaluru
Friday, August 1, 2025
HomeBusinessMangalore ನಲ್ಲಿ ಭಾರತದ ಅತಿದೊಡ್ಡ LPG  ಭೂಗತ ಸಂಗ್ರಹಾಗಾರ ಸಿದ್ಧ

Mangalore ನಲ್ಲಿ ಭಾರತದ ಅತಿದೊಡ್ಡ LPG  ಭೂಗತ ಸಂಗ್ರಹಾಗಾರ ಸಿದ್ಧ

- Advertisement -
- Advertisement -

Mangalore: ಭಾರತದ ಅತಿದೊಡ್ಡ ಭೂಗತ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಂಗ್ರಹಾಗಾರ ಮಂಗಳೂರಿನಲ್ಲಿ (Mangalore) ನಿರ್ಮಾಣವಾಗಿದೆ. ಈ ಯೋಜನೆಯು ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಹಿಂದೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ 60,000 ಟನ್ ಸಾಮರ್ಥ್ಯದ ಸಂಗ್ರಹಾಗಾರವೇ ಅತಿದೊಡ್ಡದ್ದಾಗಿತ್ತು. ಆದರೆ ಇದೀಗ ಮಂಗಳೂರಿನಲ್ಲಿ ನಿರ್ಮಿತವಾದ ಈ ಹೊಸ ಸಂಗ್ರಹಾಗಾರ 80,000 ಟನ್ ಸಾಮರ್ಥ್ಯ ಹೊಂದಿದ್ದು, ಇದನ್ನು ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಕಂಪನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ನಿರ್ಮಿಸಿದೆ.

ಈ ಸಂಗ್ರಹಾಗಾರ ದೇಶದ ಪೆಟ್ರೋಲಿಯಂ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಭದ್ರತೆಗೆ ಸಹಕಾರಿಯಾಗುತ್ತದೆ. ಭಾರತದ ಇತರ LPG ಭೂಗತ ಸಂಗ್ರಹಾಗಾರಗಳ ಪೈಕಿ ಮಂಗಳೂರಿನದು ಎರಡನೇದು ಮಾತ್ರ.

ಸಂಗ್ರಹಾಗಾರದ ವೈಶಿಷ್ಟ್ಯಗಳು

  • ಇದು 6 ಲಕ್ಷ ಬ್ಯಾರೆಲ್ ಅಥವಾ 60 ಮಿಲಿಯನ್ ಲೀಟರ್ LPG ಸಂಗ್ರಹಿಸಬಲ್ಲದು.
  • ಇಲ್ಲಿ ಪ್ರತ್ಯೇಕವಾಗಿ 40,000 ಟನ್ ಪ್ರೊಪೇನ್ ಮತ್ತು 60,000 ಟನ್ ಬ್ಯುಟೇನ್ ಸಂಗ್ರಹಿಸಬಲ್ಲ ಎರಡು ಭೂಗತ ಕೊಠಡಿಗಳಿವೆ.
  • ಈ ಯೋಜನೆಗೆ 854 ಕೋಟಿ ರೂ ವೆಚ್ಚವಾಗಿದೆ.
  • ಇತ್ತೀಚೆಗೆ ನಡೆಯದ ‘ಕ್ಯಾವರ್ನ್ ಆ್ಯಕ್ಸಪ್ಟೆನ್ಸ್ ಟೆಸ್ಟ್ (CAT)’ನ್ನು ಯಶಸ್ವಿಯಾಗಿ ಪೂರೈಸಲಾಗಿದೆ.
  • ಸಂಗ್ರಹಾಗಾರದಲ್ಲಿ 1,083 ಮೀಟರ್ ಉದ್ದದ ಸುರಂಗವಿದೆ. ಮುಖ್ಯ ಘಟಕಗಳು ಎಸ್1 ಮತ್ತು ಎಸ್2 ಕ್ರಮವಾಗಿ 220 ಮತ್ತು 225 ಮೀಟರ್ ಆಳದಲ್ಲಿವೆ.

ಇಂಧನ ಪೂರೈಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಮತ್ತು ಪೂರೈಕೆ ಅಡಚಣೆಗಳನ್ನು ನಿವಾರಣೆಗೆ ಇದು ಸಹಾಯಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page