back to top
23.4 C
Bengaluru
Wednesday, October 8, 2025
HomeNewsಭಾರತದ ರೋಚಕ ಜಯ: England ವಿರುದ್ಧ 6 ರನ್ ಗೆಲುವು, ಸರಣಿ 2-2 ಸಮಬಲ

ಭಾರತದ ರೋಚಕ ಜಯ: England ವಿರುದ್ಧ 6 ರನ್ ಗೆಲುವು, ಸರಣಿ 2-2 ಸಮಬಲ

- Advertisement -
- Advertisement -

ಭಾರತ ಇಂಗ್ಲೆಂಡ್ (England) ವಿರುದ್ಧ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ (Test match) ರೋಚಕ ಗೆಲುವು ಸಾಧಿಸಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ಈ ಪಂದ್ಯ ನಡೆದಿತ್ತು. ಇದರೊಂದಿಗೆ 5 ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಸರಣಿ 2-2 ಅಂತರದಿಂದ ಡ್ರಾ ಆಯಿತು.

ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಕರುಣ್ ನಾಯರ್ ಅರ್ಧಶತಕ ಬಾರಿಸಿ ಉತ್ತಮ ಆಟವಾಡಿದರು. ಉಳಿದವರು ದೊಡ್ಡ ಮೊತ್ತ ಕಲೆ ಹಾಕದ ಕಾರಣ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಬೌಲರ್‌ಗಳು ಬಿಗಿಯಾದ ಬೌಲಿಂಗ್ ನಡೆಸಿದರು. ಇಂಗ್ಲೆಂಡ್ ಕೂಡ ದೊಡ್ಡ ಮೊತ್ತ ಬಾರಿಸಲಾಗದೆ 247 ರನ್‌ಗೆ ಆಲೌಟ್ ಆಯಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಶತಕ ಬಾರಿಸಿದರು. ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅರ್ಧಶತಕ ಬಾರಿಸಿ ಭಾರತವನ್ನು 396 ರನ್‌ಗೆ ತಲುಪಿಸಿದರು. ಇಂಗ್ಲೆಂಡ್ ಗೆ 374 ರನ್ ಗುರಿಯಾಯಿತು.

ಇಂಗ್ಲೆಂಡ್ ತಂಡ ಕೊನೆವರೆಗೆ ಹೋರಾಟ ನಡೆಸಿದರೂ 6 ರನ್‌ಗಳಿಂದ ಸೋಲಾಯಿತು.

ಮೋಹಮ್ಮದ್ ಸಿರಾಜ್ 5 ವಿಕೆಟ್ ಮತ್ತು ಪ್ರಸಿದ್ಧ ಕೃಷ್ಣ 4 ವಿಕೆಟ್ ಪಡೆದು ಇಂಗ್ಲೆಂಡ್‌ನ ತಿರುವನ್ನು ಮುರಿದರು.

ಐಸಿಸಿ ನಿಯಮದ ಪ್ರಕಾರ, ಸರಣಿ ಡ್ರಾ ಆದರೆ ಹಿಂದಿನ ಸರಣಿಯ ಗೆದ್ದ ತಂಡಕ್ಕೆ ಟ್ರೋಫಿ ನೀಡಲಾಗುತ್ತದೆ. ಹಿಂದಿನ ಸರಣಿಯನ್ನು ಇಂಗ್ಲೆಂಡ್ ಗೆದ್ದಿದ್ದರಿಂದ ಟ್ರೋಫಿ ಅವರದೇ.

5 ಪಂದ್ಯಗಳ ಸರಣಿಯಲ್ಲಿ ಸಿರಾಜ್ 23 ವಿಕೆಟ್ ಪಡೆದು ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದಾರೆ. ಅವರು 2 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ.

5ನೇ ಪಂದ್ಯದಲ್ಲಿ 9 ವಿಕೆಟ್ ಪಡೆದ ಸಿರಾಜ್, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ.

10 ಇನ್ನಿಂಗ್ಸ್‌ಗಳಲ್ಲಿ 754 ರನ್ ಬಾರಿಸಿದ ಗಿಲ್, ಮ್ಯಾನ್ ಆಫ್ ದಿ ಸಿರೀಸ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ ಕೂಡ ಇದೇ ಪ್ರಶಸ್ತಿಗೆ ಪಾತ್ರರಾದರು.

ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಬುಮ್ರಾ ಸಾಧನೆಯನ್ನು ಸಿರಾಜ್ ಸರಿಗಟ್ಟಿದ್ದಾರೆ (23 ವಿಕೆಟ್).

ಇದು ಇಂಗ್ಲೆಂಡ್‌ಗೆ ಕಮ್ಮಿ ಅಂತರದಿಂದ ಸೋಲಿರುವ 4ನೇ ಘಟನೆ. ಇತ್ತೀಚೆಗಿನ ಕಮ್ಮಿ ಅಂತರದ ಸೋಲುಗಳು,

  • ನ್ಯೂಜಿಲೆಂಡ್ ವಿರುದ್ಧ 1 ರನ್ (2023)
  • ಆಸ್ಟ್ರೇಲಿಯಾ ವಿರುದ್ಧ 3 ರನ್ ಮತ್ತು 6 ರನ್
  • ಭಾರತ ವಿರುದ್ಧ 6 ರನ್

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page