ಭಾರತ ಈಗ ಡ್ರೋನ್ ಹಿಂಡನ್ನು ಎದುರಿಸಲು ‘ಭಾರ್ಗವಸ್ತ್ರ’ (Bhargavastra) ಎಂಬ ಹೊಸ ಸ್ವದೇಶಿ ಆಯುಧವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ (SDAL) ತಯಾರಿಸಿದೆ. ಭಾರ್ಗವಸ್ತ್ರವು ಕಡಿಮೆ ವೆಚ್ಚದಲ್ಲಿ ಶತ್ರು ಡ್ರೋನ್ ಗಳನ್ನು ನಾಶ ಮಾಡುವ ಕಡಿಮೆ ಕಾಲದಲ್ಲಿ ಕೆಲಸ ಮಾಡುವ ಕೌಂಟರ್-ಡ್ರೋನ್ ವ್ಯವಸ್ಥೆಯಾಗಿದೆ.
- 2025 ಮೇ 13ರಂದು ಗೋಪಾಲಪುರದ ಸೀವರ್ಡ್ ಫೈರಿಂಗ್ ರೇಂಜ್ ನಲ್ಲಿ ಈ ವ್ಯವಸ್ಥೆಯ ಮೈಕ್ರೋ ರಾಕೆಟ್ ಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.
- ಮೂರು ಬಾರಿ ರಾಕೆಟ್ ಗಳನ್ನು ಹಾರಿಸಿ ಪರೀಕ್ಷೆ ನಡೆಸಿದಾಗ ಎಲ್ಲವೂ ನಿರೀಕ್ಷಿತವಾಗಿ ಕಾರ್ಯನಿರ್ವಹಿಸಿದವು.
- ಈ ವ್ಯವಸ್ಥೆ ದೊಡ್ಡ ಪ್ರಮಾಣದ ಡ್ರೋನ್ ದಾಳಿಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಭಾರ್ಗವಸ್ತ್ರದ ವಿಶೇಷತೆ
- 2.5 ಕಿಲೋಮೀಟರ್ ದೂರದೊಳಗಿನ ಸಣ್ಣ ಡ್ರೋನ್ ಗಳನ್ನು ಪತ್ತೆ ಹಚ್ಚಿ ನಾಶ ಮಾಡಬಹುದು.
- ಮೈಕ್ರೋ ರಾಕೆಟ್ ಗಳನ್ನು 20 ಮೀಟರ್ ತ್ರಿಜ್ಯದೊಳಗಿನ ಡ್ರೋನ್ ಗಳ ಸಮೂಹವನ್ನು ತಟಸ್ಥಗೊಳಿಸುತ್ತವೆ.
- ಎರಡನೇ ಹಂತದಲ್ಲಿ ನಿಖರ ಪಾಯಿಂಟ್ ಹಿಟ್ ಮಾಡಲು ಸೂಕ್ಷ್ಮ ಮೈಕ್ರೋ ಕ್ಷಿಪಣಿಗಳನ್ನು ಬಳಕೆ ಮಾಡಲಾಗುತ್ತದೆ.
ತಂತ್ರಜ್ಞಾನ ಮತ್ತು ವಿನ್ಯಾಸ
- SDAL ಮಾಡ್ಯೂಲರ್ ತಂತ್ರಜ್ಞಾನದಿಂದ ಸೆನ್ಸಾರ್ ಮತ್ತು ಶೂಟರ್ ಅನ್ನು ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹೊಂದಿಸಬಹುದು.
- ಹೊಸ C4I ತಂತ್ರಜ್ಞಾನ ಇರುವ ರಾಡಾರ್ 6-10 ಕಿ.ಮೀ ದೂರದಿಂದ ಸಣ್ಣ ಡ್ರೋನ್ ಗಳನ್ನೂ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
- ಎತ್ತರದ ಪ್ರದೇಶಗಳು ಸೇರಿದಂತೆ ವಿವಿಧ ಭೂಮಿಗಳಲ್ಲಿ ಸರಾಗವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
ಭಾರತದ ಸಶಸ್ತ್ರ ಪಡೆಗಳಿಗೆ ಈ ಭಾರ್ಗವಸ್ತ್ರ ಒಂದು ದೊಡ್ಡ ಸಾಧನೆಯಾಗಿದ್ದು, ಇದು ದೇಶದ ಮೇಡ್ಇನ್ ಇಂಡಿಯಾ ಯೋಜನೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಮಾಡ್ಯೂಲರ್ ವಿನ್ಯಾಸ ಮತ್ತು ಕಡಿಮೆ ವೆಚ್ಚದಿಂದ, ಇದನ್ನು ಬೇರೆ ಬೇರೆ ಯುದ್ಧ ಪರಿಸ್ಥಿತಿಗಳಲ್ಲಿ ಬಳಸಬಹುದಾಗಿದೆ.