ಟೆಕ್ ಮಾರುಕಟ್ಟೆಯಲ್ಲಿ (tech market) ಯಶಸ್ವಿಯಾಗಲು ಗ್ರಾಹಕರ ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ಕಾಲಕಾಲಕ್ಕೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಬೇಕು. ಪ್ರಸ್ತುತ, foldable Mobileಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ.
ಇವುಗಳ ಕ್ರೇಜ್ ಬೇರೆ ಲೆವೆಲ್. ಇದರೊಂದಿಗೆ ಎಲ್ಲಾ ಮೊಬೈಲ್ ತಯಾರಿಕಾ ಕಂಪನಿಗಳು ಅದೇ ಫೀಚರ್ಗಳನ್ನು ಹೊಂದಿರುವ ಇತ್ತೀಚಿನ foldable ಮೊಬೈಲ್‌ಗಳನ್ನು ಮಾರುಕಟ್ಟೆಗೆ ತರಲು ಆಸಕ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ಫಿನಿಕ್ಸ್ ತನ್ನ ಮೊದಲ ಫ್ಲಿಪ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿರುವ ಈ ಹೊಸ Infinix Zero Flip ಮೊಬೈಲ್ Android 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಹೊಸ Infinix Zero Flip ಸ್ಮಾರ್ಟ್‌ಫೋನ್‌ನ ಮಾರಾಟವು ಅಕ್ಟೋಬರ್ 24 ರಿಂದ Flipkartನಲ್ಲಿ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.
SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡುವ ಗ್ರಾಹಕರು ರೂ.5,000 ರಿಯಾಯಿತಿ ಪಡೆಯಬಹುದು ಎಂದು ಇನ್ಫಿನಿಕ್ಸ್ ಪ್ರಕಟಿಸಿದೆ. ಅಂದ್ರೆ ನೀವು ಈ ಮೊಬೈಲ್ ಅನ್ನು ಕೇವಲ 44,999 ರೂ.ಗೆ ಖರೀದಿಸಬಹುದಾಗಿದೆ.
ವಿಶೇಷತೆ
- ಡ್ಯುಯಲ್ ಸಿಮ್ ಸೌಲಭ್ಯ
- ಬ್ಯಾಟರಿ: 4,720mAh
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಶನ್ 8200
- ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
- ರಿಯರ್ ಕ್ಯಾಮೆರಾ: 50MP
- ಅಲ್ಟ್ರಾ ವೈಡ್ ಕ್ಯಾಮೆರಾ: 50MP
- ಸೆಲ್ಫಿ ಕ್ಯಾಮೆರಾ: ಎಕ್ಸ್ಟರ್ನಲ್ ಸ್ಕ್ರೀನ್ನಲ್ಲಿ 50MP
- 70W ವೇಗದ ಚಾರ್ಜಿಂಗ್
ಈ ಹೊಸ foldable ಮೊಬೈಲ್‌ನಿಂದ 4K ವರೆಗೆ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು ಎಂದು Infinix ಹೇಳಿದೆ.