back to top
20.3 C
Bengaluru
Sunday, August 31, 2025
HomeIndiaಭಾರತೀಯ ನೌಕಾ ಹಡಗು INS Ranvir ನಲ್ಲಿ ಸ್ಫೋಟ, ಸಿಬ್ಬಂದಿ ಸಾವು

ಭಾರತೀಯ ನೌಕಾ ಹಡಗು INS Ranvir ನಲ್ಲಿ ಸ್ಫೋಟ, ಸಿಬ್ಬಂದಿ ಸಾವು

- Advertisement -
- Advertisement -

ಮುಂಬೈನ ನೌಕಾ ನೌಕಾನೆಲೆಯಲ್ಲಿ ಮಂಗಳವಾರ ಭಾರತೀಯ ನೌಕಾ ಹಡಗು (Indian Navy Ship) ಐಎನ್‌ಎಸ್ ರಣವೀರ್‌ನಲ್ಲಿ (INS Ranvir) ಸಂಭವಿಸಿದ ಸ್ಫೋಟದಲ್ಲಿ ಮೂವರು ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಮಾನವರಹಿತ ಹವಾನಿಯಂತ್ರಣ ವಿಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಫ್ರಿಯಾನ್ ಅನಿಲ (Freon Gas) ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದೆಂದು ಅನುಮಾನಿಸಲಾಗಿದೆ.

“ಇಂದು ಮುಂಬೈನ ನೌಕಾನೆಲೆಯಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ, ಐಎನ್‌ಎಸ್ ರಣವೀರ್‌ನಲ್ಲಿನ ಆಂತರಿಕ ವಿಭಾಗದಲ್ಲಿ ಸ್ಫೋಟದಿಂದ ಉಂಟಾದ ಗಾಯಗಳಿಂದ ಮೂವರು ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಹಡಗಿನ ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯಿಸಿದ್ದು, ತ್ವರಿತವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಯಾವುದೇ ಪ್ರಮುಖ ವಸ್ತು ಹಾನಿ ವರದಿಯಾಗಿಲ್ಲ” ಎಂದು ಭಾರತೀಯ ನೌಕಾಪಡೆಯ (Indian Navy) ಹೇಳಿಕೆಯಲ್ಲಿ ತಿಳಿಸಿದೆ.

“ಐಎನ್‌ಎಸ್ ರಣವೀರ್ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿದೆ ಮತ್ತು ಶೀಘ್ರದಲ್ಲೇ ಬೇಸ್ ಪೋರ್ಟ್‌ಗೆ ಮರಳಲಿದೆ” ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಮರಣ ಹೊಂದಿದ ನೌಕಾಪಡೆ ಸಿಬ್ಬಂದಿ, ಸ್ಫೋಟದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಡಿದ್ದರು ಎನ್ನಲಾಗಿದೆ.

ಇತರ 11 ನೌಕಾ ಸಿಬ್ಬಂದಿಗೆ ಹಿಮ್ಮಡಿ, ಮೊಣಕಾಲುಗಳಲ್ಲಿ ಮುರಿತದಂತಹ ಗಾಯಗಳಿವೆ ಮತ್ತು ಕೆಲವರಿಗೆ ಫ್ರೀಯಾನ್ ಉಸಿರಾಟದಿಂದ ಸಣ್ಣ ಆಂತರಿಕ ಗಾಯಗಳಿವೆ. ಈ ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page