ಪ್ರಸ್ತುತ ಭಾರತ ಸರಿಯಾಗಿ ನಿದ್ದೆ (Sleep) ಮಾಡುತ್ತಿಲ್ಲ ಎಂಬಂತಿದೆ, ಕಾರಣ ಸಾಕಷ್ಟು ಭಾರತೀಯರು ನಿದ್ರೆಯ ಕೊರತೆ (Insomnia) ಅನುಭವಿಸುತ್ತಿದ್ದಾರೆ. ನಿದ್ರೆಯು ಅಗತ್ಯ ಪ್ರಕ್ರಿಯೆಯಾಗಿದ್ದು ಅದು ಅರಿವಿನ ಮಾತ್ರವಲ್ಲದೆ ದೈಹಿಕ ಆರೋಗ್ಯವನ್ನು (Physical health) ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯ (Immunity) ಅತ್ಯುತ್ತಮ ಕಾರ್ಯನಿರ್ವಹಣೆಗೆ ನಿದ್ರೆ ಮುಖ್ಯವಾಗಿದೆ. ನಿದ್ರೆ ಕಡಿಮೆಯಾದರೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು, ಚಯಾಪಚಯ (Metabolism) ಮತ್ತು ಸಿರ್ಕಾಡಿಯನ್ ಲಯಗಳ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ಮತ್ತು ಆರೋಗ್ಯ ತಜ್ಞರು ಹೇಳುತ್ತಾರೆ.
ನಿದ್ದೆಗೆಡುವುದರಿಂದ ಸಹಜವಾಗಿಯೇ ರಕ್ತದೊತ್ತಡ (Blood pressur) ಹೆಚ್ಚುತ್ತದೆ. ಅಲ್ಲದೆ ಮನಸ್ಸು ವಿವಿಧ ಯೋಚನೆಗಳಿಂದ ವಿಕಾರಗೊಂಡು ಕ್ರೋಧಗೊಳ್ಳುತ್ತದೆ. ಎಷ್ಟೇ ಕಷ್ಟಪಟ್ಟರೂ ನಿದ್ದೆ ಬಾರದಿದ್ದಾಗ ವ್ಯಕ್ತಿ ಸಹಜವಾಗಿಯೇ ಕುಪಿತಗೊಳ್ಳುತ್ತಾನೆ. ಮನಸ್ಸು ಆತನ ಹಿಡಿತದಲ್ಲಿರದೆ, ನಿಯಂತ್ರಣ ತಪ್ಪುತ್ತದೆ. ಒಂದೆರಡು ದಿನ ನಿದ್ದೆ ಇಲ್ಲದಿದ್ದರೇನೇ ಕಷ್ಟಪಡಬೇಕಾಗುತ್ತದೆ. ಅಂಥಾದ್ದರಲ್ಲಿ ಪ್ರತಿದಿನವೂ ನಿದ್ದೆಯಿಲ್ಲದಿದ್ದರೆ ವ್ಯಕ್ತಿಯ ಪಾಡು ದೇವರಿಗೇ ಪ್ರೀತಿ. ಯಾವ ಕೆಲಸದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳದೆ, ಏಕಾಗ್ರತೆಯಿಲ್ಲದೆ ಆತ ಪರದಾಡಬೇಕಾಗುತ್ತದೆ.
ಭಾರತದಲ್ಲಿ ಸಾಮಾನ್ಯ ನಿದ್ರಾಹೀನತೆಗಳೆಂದರೆ ಸ್ಲೀಪ್ ಅಪ್ನಿಯ, (Sleep apnea) ನಿದ್ರಾಹೀನತೆ ಮತ್ತು ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್ (restless legs syndrome). ಸ್ಲೀಪ್ ಅಪ್ನಿಯ (Sleep apnea) ಎನ್ನುವುದು ಶ್ವಾಸನಾಳದ ಅಡಚಣೆಯಿಂದಾಗಿ ನಿದ್ರೆಯ ಸಮಯದಲ್ಲಿ ಉಸಿರಾಟದ ಅಡಚಣೆಯಾಗಿದೆ. ನಿದ್ರಾಹೀನತೆಯು (Insomnia ) ನಿದ್ರಿಸುವುದನ್ನು ಅಡ್ಡಿಪಡಿಸುತ್ತದೆ, ಇದು ಸಾಮಾನ್ಯವಾಗಿ ಒತ್ತಡ, ಆತಂಕ ಅಥವಾ ಕಳಪೆ ನಿದ್ರೆಯ ಅಭ್ಯಾಸಗಳಿಗೆ ಸಂಬಂಧಿಸಿದೆ. ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್ (restless legs syndrome) ಕಾಲುಗಳನ್ನು ಸರಿಸಲು ಅನಿಯಂತ್ರಿತ ಬಯಕೆಯನ್ನು ಉಂಟುಮಾಡುತ್ತದೆ, ಸಾಮಾನ್ಯವಾಗಿ ಅಹಿತಕರ ಸಂವೇದನೆಗಳ ಕಾರಣದಿಂದಾಗಿ ಹೀಗಾಗಲಿದೆ.
ಪ್ರತಿಯೊಬ್ಬ ವ್ಯಕ್ತಿಯೂ ದೇಹಕ್ಕೆ ಅವಶ್ಯವಿರುವಷ್ಟು ನಿದ್ದೆಯನ್ನು ಮಾಡಲೇಬೇಕು. ಎಷ್ಟೇ ಒತ್ತಡವಿರಲಿ, ತಲೆಬಿಸಿಯಿರಲಿ ಮನಸ್ಸು ಇವನ್ನೆಲ್ಲ ಮರೆತು ಉತ್ಸಾಹದಿಂದಿರುವಂಥ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿಡಲು ಧ್ಯಾನ, ಪ್ರಾಣಾಯಾಮವನ್ನು ಇಂದು ಎಲ್ಲ ತಜ್ಞರೂ ಸೂಚಿಸುತ್ತಿದ್ದಾರೆ. ಅತಿಯಾದ ನಿದ್ದೆ ದೇಹಕ್ಕೆ ಎಷ್ಟು ಹಾನಿಕರವೋ, ನಿದ್ರಾಹೀನತೆಯೂ ಅಷ್ಟೇ ಹಾನಿಕರ.