back to top
21.4 C
Bengaluru
Tuesday, October 7, 2025
HomeHealthIodine (ಅಯೋಡಿನ್) ಕೊರತೆಯಿಂದಾಗುವ ಸಮಸ್ಯೆಗಳು

Iodine (ಅಯೋಡಿನ್) ಕೊರತೆಯಿಂದಾಗುವ ಸಮಸ್ಯೆಗಳು

- Advertisement -
- Advertisement -

ಸೇವಿಸುವ ಆಹಾರದಲ್ಲಿ ಉಪ್ಪು (salt) ಹೆಚ್ಚಾದರೆ ಒಂದು ಅಗಳು ಆಹಾರವನ್ನು ತಿನ್ನಲು ಸಾಧ್ಯವೇ ಇಲ್ಲ. ಒಂದು ವೇಳೆ ಕಡಿಮೆಯಾದರೆ ಅಡುಗೆಯೂ ರುಚಿಸುವುದೇ ಇಲ್ಲ. ರುಚಿಗೆ ಮಾತ್ರವಲ್ಲದೇ, ದೇಹಕ್ಕೂ ಈ ಅಯೋಡಿನ್ (iodine) ಅಂಶವು ಬೇಕೇ ಬೇಕು.

ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾದ ಸೂಕ್ಷ್ಮ ಪೋಷಕಾಂಶವು ಇದಾಗಿದ್ದು, ದೇಹದಲ್ಲಿ ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಕಾರ್ಯನಿರ್ವಹಣೆಗೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅಗತ್ಯವಾಗಿದೆ.

ಹೀಗಾಗಿ ಅಕ್ಟೋಬರ್ 21 ರಂದು ಅಯೋಡಿನ್ ಕೊರತೆಯಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಅಯೋಡಿನ್ ಕೊರತೆ ದಿನವನ್ನು (World Iodine Deficiency Day) ಆಚರಿಸಲಾಗುತ್ತದೆ.

ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗಗಳ ಬಗ್ಗೆ ಪ್ರಪಂಚದಾದ್ಯಂತ ಜನರಿಗೆ ಅರಿವು ಮೂಡಿಸುವ ಮತ್ತು ಪ್ರತಿ ಮನೆಯಲ್ಲೂ ಅಯೋಡಿನ್ ಭರಿತ ಉಪ್ಪಿನ ಲಭ್ಯತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 21 ರಂದು ವಿಶ್ವ ಅಯೋಡಿನ್ ಕೊರತೆ (World Iodine Deficiency Day) ತಡೆಗಟ್ಟುವ ದಿನವನ್ನು ಆಚರಿಸಲಾಗುತ್ತದೆ.

ಈ ವಿಶೇಷ ದಿನದಂದು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.

Iodine ಕೊರತೆ ಲಕ್ಷಣಗಳು

ನಿಮ್ಮ ದೇಹದಲ್ಲಿ ಅಯೋಡಿನ್ ಕೊರತೆಯಿದ್ದರೆ, ನಿಮ್ಮ ತೂಕ ಹೆಚ್ಚಾಗಬಹುದು. ಅತಿಯಾದ ಶೀತ, ಒಣ ಚರ್ಮ, ಅತಿಯಾದ ಕೂದಲು ಉದುರುವಿಕೆ, ಹೃದಯ ಬಡಿತ ನಿಧಾನವಾಗುವುದು, ಮರೆವು, ಗಂಟಲು ನೋವು, ಊತ, ಅತಿಯಾದ ನಿದ್ರೆ, ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

ಗರ್ಭಿಣಿ ಮಹಿಳೆಯಲ್ಲಿ ಅಯೋಡಿನ್ ಕೊರತೆಯಿದ್ದರೆ, ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಈ ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ಕಂಡು ಬಂದರೆ ಗರ್ಭಪಾತ, ಅಂಗವಿಕಲ ಶಿಶು, ನವಜಾತ ಶಿಶುವಿನಲ್ಲಿ ಗಳಗಂಡ ಹಾಗೂ ಮಕ್ಕಳಲ್ಲಿ ಕುಬ್ಜತೆ, ಶತ ದಡ್ಡತನ, ಮೆಳ್ಳೆಗಣ್ಣು, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ನಿಧಾನವಾಗುತ್ತದೆ.

ಕಿವುಡುತನ, ಲೈಂಗಿಕ ಬೆಳವಣಿಗೆ ಆಗದಿರುವುದು, ತೊದಲುವಿಕೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಉತ್ತಮ ಮಾರ್ಗವೆಂದರೆ ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಅಯೋಡಿನ್ ಉಪ್ಪನ್ನು ಸೇವಿಸುವುದು.

ಅಯೋಡಿನ್ ಭರಿತ ಆಹಾರ

ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಅಯೋಡಿನ್ ದೊರೆಯುತ್ತದೆ. ಈ ಸಿಪ್ಪೆಯು ಹೆಚ್ಚು ಅಯೋಡಿನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದೆ.

ಹಾಲು, ಒಣದ್ರಾಕ್ಷಿ, ಮೊಸರು, ಕಂದು ಅಕ್ಕಿ, ಸಮುದ್ರದ ಮೀನು, ಉಪ್ಪು, ಕಾಡ್ಲಿವರ್ ಆಯಿಲ್, ಮಾಂಸ, ಮೊಟ್ಟೆ, ಧಾನ್ಯ-ಬೇಳೆಕಾಳು, ಸೊಪ್ಪು-ಪಾಲಾಕ್, ರಾಗಿ, ಸಾಸಿವೆ, ಜೋಳ, ಶೇಂಗ ಹಾಗೂ ಉದ್ದು ಈ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿನ ಅಯೋಡಿನ್ ಕೊರತೆಯನ್ನು ನೀಗಿಸಿಕೊಳ್ಳಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page