New Delhi: ಆ್ಯಪಲ್ (Apple) ಸಂಸ್ಥೆಯ latest ಹಾಗು ಅತ್ಯುನ್ನತ ಮಾಡಲ್ ಆದ ಐಫೋನ್ 16 ಪ್ರೋ (iPhone 16 Pro) ಸರಣಿಯ ಫೋನ್ಗಳು ಭಾರತದಲ್ಲಿ ನಿರ್ಮಾಣವಾಗಲಿವೆ. ಈ ಹೈ ಎಂಡ್ ಫೋನ್ಗಳು ಚೀನಾ (China) ಬಿಟ್ಟರೆ ಬೇರೆಲ್ಲೂ ಅಸೆಂಬಲ್ ಆಗಿಲ್ಲ.
ಆ್ಯಪಲ್ನ ಸಪ್ಲೈಯರ್ ಆಗಿರುವ ಫಾಕ್ಸ್ಕಾನ್ (Foxconn) ತನ್ನ ತಮಿಳುನಾಡು ಘಟಕದಲ್ಲಿ ಐಫೋನ್16 ಪ್ರೋ ಸೀರೀಸ್ ಫೋನ್ ಅನ್ನು ತಯಾರಿಸಲಿದೆ. ಅದಕ್ಕಾಗಿ ಆ್ಯಪಲ್ ಕಂಪನಿಯಿಂದ ಅಗತ್ಯವಾದ ಉಪಕರಣವನ್ನು 31.8 ಮಿಲಿಯನ್ ಡಾಲರ್ (267 ಕೋಟಿ ರೂ) ಕೊಟ್ಟು ಖರೀದಿಸಿದೆ.
ಕೆಲ ವರ್ಷಗಳ ಹಿಂದಿನವರೆಗೂ ಆ್ಯಪಲ್ ಸಂಸ್ಥೆಯ ಬಹುತೇಕ ಉತ್ಪನ್ನಗಳ ತಯಾರಿಕೆ ಚೀನಾದಲ್ಲೇ ಹೆಚ್ಚಾಗಿ ಆಗುತ್ತಿತ್ತು. ಕೋವಿಡ್ ಬಳಿಕ ಹಲವು ಅಮೆರಿಕನ್ ಕಂಪನಿಗಳು ಚೀನಾ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ.
ಭಾರತದಲ್ಲಿ ಫಾಕ್ಸ್ಕಾನ್, ಟಾಟಾ ಎಲೆಕ್ಟ್ರಾನಿಕ್ಸ್, ಪೆಗಾಟ್ರಾನ್ ಮೊದಲಾದ ಕಂಪನಿಗಳು ಆ್ಯಪಲ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿವೆ.
ಆ್ಯಪಲ್ನ ಸರಬರಾಜುದಾರ ಸಂಸ್ಥೆಗಳಲ್ಲಿ ಒಂದಾದ ಅಮೆರಿಕದ ಜೇಬಿಲ್ (Jabil) ಭಾರತದಲ್ಲಿ ಇನ್ನಷ್ಟು ಫ್ಯಾಕ್ಟರಿಗಳನ್ನು ಸ್ಥಾಪಿಸಲು ಯೋಜಿಸಿದೆ. ಪುಣೆಯಲ್ಲಿ ಜೇಬಿಲ್ ಎರಡು ಫ್ಯಾಕ್ಟರಿ ಹೊಂದಿದೆ.
ವೈಫೈ, ಎನ್ಎಫ್ಸಿ, ಆರ್ಎಫ್ಐಡಿ, ಕ್ಯಾಮರಾ ಅಪ್ಟಿಕ್ಸ್, ಪ್ಲಾಸ್ಟಿಕ್ ಕೇಸಿಂಗ್ಸ್ ಮೊದಲಾದ ಬಿಡಿಭಾಗಗಳನ್ನು ಆ್ಯಪಲ್ ಉತ್ಪನ್ನಗಳಿಗಾಗಿ ತಯಾರಿಸಲಾಗುತ್ತಿದೆ.
ತಮಿಳುನಾಡಿನ ತಿರುಚ್ಚಿಯಲ್ಲಿ ಒಂದು ಯೂನಿಟ್ ಸ್ಥಾಪನೆಯಾಗಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ಫ್ಯಾಕ್ಟರಿಗಳ ಸ್ಥಾಪನೆಗೆ ಎರಡು ಸಾವಿರ ಕೋಟಿ ರೂಗೂ ಅಧಿಕ ಹೂಡಿಕೆ ಮಾಡಲು ಜೆಬಿಲ್ (Jabil) ಯೋಜಿಸಿದೆ.