ಆಪಲ್ ತನ್ನ ಐಫೋನ್ 16 ಸರಣಿಯ ನಂತರ, ಇಂದು (ಫೆಬ್ರವರಿ 19) ಹೊಸ ಐಫೋನ್ SE 4 (iPhone SE 4) ಅನ್ನು ಬಿಡುಗಡೆ ಮಾಡುತ್ತಿದೆ. ಈ ಫೋನ್ ಅಗ್ಗದ ದರದಲ್ಲಿ ಪ್ರೀಮಿಯಂ ಅನುಭವ ನೀಡಲಿದೆ. ಇದರಲ್ಲಿ ದೊಡ್ಡ ಡಿಸ್ಪ್ಲೇ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಹೆಚ್ಚಿನ ಬ್ಯಾಟರಿ ಸಾಮರ್ಥ್ಯವಿರಲಿದೆ.
ಈ ಸಮಾರಂಭವನ್ನು ಆಪಲ್ ತನ್ನ YouTube ಚಾನೆಲ್ ಮತ್ತು ಸೋಶಿಯಲ್ ಮೀಡಿಯಾ platformಗಳಲ್ಲಿ ಲೈವ್ ಪ್ರಸಾರ ಮಾಡಲಿದೆ. ಇದು ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಪ್ರಾರಂಭವಾಗಲಿದೆ.
ಈ ಹೊಸ ಐಫೋನ್ SE 4 ದರ ₹43,490 ($499) ಇರಬಹುದು. ಭಾರತದಲ್ಲಿ 50 ಸಾವಿರ ರೂ. ಒಳಗೆ ಈ ಫೋನ್ ಲಭ್ಯವಾಗುವ ಸಾಧ್ಯತೆಯಿದೆ. ಜೊತೆಗೆ, Powerbeats Pro 2 earbuds ಕೂಡ ಬಿಡುಗಡೆ ಮಾಡಲಿದೆ.
ಐಫೋನ್ SE 4 ವೈಶಿಷ್ಟ್ಯಗಳು
- 6.1 ಇಂಚಿನ OLED ಡಿಸ್ಪ್ಲೇ
- 48MP ಹಿಂದಿನ ಕ್ಯಾಮೆರಾ, 12MP ಸೆಲ್ಫಿ ಕ್ಯಾಮೆರಾ
- A18 ಬಯೋನಿಕ್ ಪ್ರೊಸೆಸರ್
- 8GB RAM, ಹೈ-ಸ್ಪೀಡ್ ಕಾರ್ಯಕ್ಷಮತೆ
- ಆಪಲ್ ಇಂಟೆಲಿಜೆನ್ಸ್ ತಂತ್ರಜ್ಞಾನ