Ahmedabad: ಪಂಜಾಬ್ ಕಿಂಗ್ಸ್ (Punjab Kings) ಹೊಸ ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಗೆಲುವು ಸಾಧಿಸಲು ಕಾತರರಾಗಿದ್ದಾರೆ. ಮಂಗಳವಾರ ಈ ಪಂದ್ಯದ ಆತಿಥ್ಯ ನರೇಂದ್ರ ಮೋದಿ ಕ್ರೀಡಾಂಗಣ ವಹಿಸಲಿದೆ.
ಕೆಕೆಆರ್ ತಂಡವನ್ನು ಮುನ್ನಡೆಸಿ ಯಶಸ್ವಿ ನಾಯಕತ್ವ ತೋರಿಸಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ತಂಡಕ್ಕೆ ಟ್ರೋಫಿ ತಂದುಕೊಡಬಹುದಾ ಎಂಬ ಕುತೂಹಲವಿದೆ. ವಿದೇಶಿ ತಾರೆಗಳಾದ ಮ್ಯಾಕ್ಸ್ವೆಲ್, ಸ್ಟೋಯ್ನಿಸ್, ಜೋಶ್ ಇಂಗ್ಲಿಸ್, ಮಾರ್ಕೊ ಯಾನ್ಸನ್ ತಂಡದ ಬಲವಾಗಿ ಇರಲಿದ್ದಾರೆ. ಜೊತೆಗೆ ನೇಹಲ್ ವಧೇರಾ, ಪ್ರಭ್ಸಿಮ್ರನ್ ಸಿಂಗ್, ಶಶಾಂಕ್ ಸಿಂಗ್ ಯುವ ಪ್ರತಿಭೆಗಳೂ ಪ್ರಮುಖ ಪಾತ್ರವಹಿಸಲಿದ್ದಾರೆ. ಅರ್ಶ್ದೀಪ್ ಸಿಂಗ್, ಯುಜುವೇಂದ್ರ ಚಹಲ್ ಮತ್ತು ಕರ್ನಾಟಕದ ವೈಶಾಖ್ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.
ಭಾರತದ ಉಪನಾಯಕ ಶುಭ್ಮನ್ ಗಿಲ್ ಈ ಬಾರಿ ಟೈಟಾನ್ಸ್ ಪರ ಚಾಂಪಿಯನ್ ಆಗುವ ನಿಟ್ಟಿನಲ್ಲಿ ತಯಾರಾಗಿದ್ದಾರೆ. ಜೋಸ್ ಬಟ್ಲರ್, ಗ್ಲೆನ್ ಫಿಲಿಪ್ಸ್, ಸಾಯ್ ಸುದರ್ಶನ್, ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್ ಸೇರಿ ಪ್ರಬಲ ಆಟಗಾರರಿದ್ದಾರೆ. RCB ಯಿಂದ ಗುಜರಾತ್ಗೆ ಬಂದ ಮೊಹಮ್ಮದ್ ಸಿರಾಜ್, ಕಗಿಸೋ ರಬಾಡ, ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ಪಡೆಗೆ ಮುನ್ನಡೆಸಲಿದ್ದಾರೆ.
Head-to-Head
- ಮುಖಾಮುಖಿ ಪಂದ್ಯಗಳು: 5
- ಪಂಜಾಬ್ ಜಯ: 2
- ಗುಜರಾತ್ ಜಯ: 3
ಸಂಭಾವ್ಯ ಆಟಗಾರರು
ಪಂಜಾಬ್: ಪ್ರಭ್ಸಿಮ್ರನ್, ಇಂಗ್ಲಿಸ್, ಶ್ರೇಯಸ್ (ನಾಯಕ), ಮ್ಯಾಕ್ಸ್ವೆಲ್, ವಧೇರಾ, ಸ್ಟೋಯ್ನಿಸ್, ಶಶಾಂಕ್, ಯಾನ್ಸನ್, ಹರ್ಪ್ರೀತ್, ವೈಶಾಖ್, ಅರ್ಶ್ದೀಪ್, ಚಹಲ್.
ಗುಜರಾತ್: ಗಿಲ್ (ನಾಯಕ), ಬಟ್ಲರ್, ಸುದರ್ಶನ್, ಫಿಲಿಪ್ಸ್, ಶಾರುಖ್, ವಾಷಿಂಗ್ಟನ್, ತೆವಾಟಿಯಾ, ರಶೀದ್, ಕಿಶೋರ್, ರಬಾಡ, ಸಿರಾಜ್, ಪ್ರಸಿದ್ಧ್ ಕೃಷ್ಣ.
ಪಂದ್ಯದ ವಿವರ
- ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
- ಸಮಯ: ಸಂಜೆ 7.30
ಇಲ್ಲಿನ ಪಿಚ್ ಅಂದಾಜು ಮಾಡುವುದು ಕಷ್ಟ. ಕಳೆದ ವರ್ಷ ಟೈಟಾನ್ಸ್ ಕೇವಲ 89 ರನ್‌ಗಳಿಗೆ ಆಲೌಟಾಗಿತ್ತು. ಆದರೆ, ಗುಜರಾತ್ ಒಮ್ಮೆ 199+ ರನ್ ಗಳಿಸಿತ್ತು. 2024ರ ಲೀಗ್‌ನಲ್ಲಿ 8 ಪಂದ್ಯಗಳಲ್ಲಿ 6 ಬಾರಿ ಚೇಸಿಂಗ್ ತಂಡ ಗೆಲುವು ಸಾಧಿಸಿದೆ.
ಎಲ್ಲರ ಕಣ್ಣು ಈ ಪಂದ್ಯದಲ್ಲಿ! ಯಾವ ತಂಡ ಮೊದಲ ಗೆಲುವು ಸಾಧಿಸುತ್ತೋ ನೋಡೋಣ!