2025ರ ಚಾಂಪಿಯನ್ಸ್ ಟ್ರೋಫಿ (Champions Trophy) ಆಯೋಜನೆ ಸಂಬಂಧ, BCCI ಒತ್ತಾಯದಂತೆ ICC ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (Pakistan Cricket Board) ಸಮ್ಮತಿ ಸೂಚಿಸಿದೆ. ಆದರೆ, ಈ ಒಪ್ಪಂದದಿಂದಾಗಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಈಗ ಐಪಿಎಲ್‌ಗೇ ಟಕ್ಕರ್ ಕೊಡಲು PSL (Pakistan Super League) ಆಯೋಜನೆಗಾಗಿ ಸಿದ್ಧತೆ ನಡೆಸುತ್ತಿದೆ. 2025ರಲ್ಲಿ, ಐಪಿಎಲ್ ಮತ್ತು ಪಿಎಸ್ಎಲ್ ಒಂದೇ ಸಮಯದಲ್ಲಿ ನಡೆಯಲಿದ್ದು, ಇದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.
ಐಪಿಎಲ್ ಮತ್ತು ಪಿಎಸ್ಎಲ್ ವೇಳಾಪಟ್ಟಿ:
- ಐಪಿಎಲ್ 2025: ಮಾರ್ಚ್ 15ರಿಂದ ಆರಂಭವಾಗಿ ಮೇ 25ಕ್ಕೆ ಅಂತ್ಯ.
- ಪಿಎಸ್ಎಲ್ 2025: ಏಪ್ರಿಲ್ 8ರಿಂದ ಆರಂಭವಾಗಿ ಮೇ 19ಕ್ಕೆ ಅಂತ್ಯ.
ಐಪಿಎಲ್‌ನ ಪ್ರಭಾವ ಮತ್ತು ಉತ್ಸಾಹದ ಮಧ್ಯೆ ಪಿಎಸ್ಎಲ್ ಸ್ಥಳ ಪಡೆದರೆ, ಪಾಕಿಸ್ತಾನ ಲೀಗ್‌ಗಾಗಿ ಇದು ದೊಡ್ಡ ಸವಾಲಾಗಬಹುದು. ಪಿಎಸ್ಎಲ್ ನಷ್ಟವಾಗುತ್ತದೆಯಾ ಅಥವಾ ತಾನು ತಾನು ಯಶಸ್ವಿಯಾಗುತ್ತದೆಯಾ ಎನ್ನುವುದು ಕಾದು ನೋಡಬೇಕಾಗಿದೆ.