New Delhi: ಇಸ್ರೋ, (ISRO) ವಿಶ್ವದ ವಾಣಿಜ್ಯ ಉಪಗ್ರಹ ಉಡ್ಡಯನ ವಲಯದಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಇದುವರೆಗೆ ಅಮೆರಿಕ ಸೇರಿ ಹಲವು ದೇಶಗಳ ಸಣ್ಣಪುಟ್ಟ ಉಪಗ್ರಹಗಳನ್ನು ಹಾರಿಸಿದ ಇಸ್ರೋ, (ISRO) ಈಗ ಅಮೆರಿಕದ ಸಂವಹನ ಉಪಗ್ರಹ ಉಡಾವಣೆಗೆ ಮುಂದಾಗಿದೆ. ಈ ಉಪಗ್ರಹವನ್ನು ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿದ್ದಾರೆ.
ಈ ಯೋಜನೆಯ ವಿಶೇಷವೆಂದರೆ, ಉಪಗ್ರಹದಿಂದ ಯಾವುದೇ ಟವರ್ ಗಳ ಅಗತ್ಯವಿಲ್ಲದೆ ನೇರವಾಗಿ ಮೊಬೈಲ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದರ ಮೂಲಕ ಬಾಹ್ಯಾಕಾಶಕ್ಕೂ ಮೊಬೈಲ್ ಸಂಪರ್ಕ ದೊರೆಯಲಿದೆ.
‘ಬ್ಲ್ಯೂ ಬರ್ಡ್’ ಹೆಸರಿನ ಈ ಉಪಗ್ರಹವನ್ನು ಟೆಕ್ಸಾಸ್ ಮೂಲದ AST ಸ್ಪೇಸ್ ಮೊಬೈಲ್ ಕಂಪನಿಯು ಅಭಿವೃದ್ಧಿಪಡಿಸಿದೆ. ಉಪಗ್ರಹ ಕಾರ್ಯಾಚರಣೆಯ ನಂತರ, ಭೂಮಿಯ ಯಾವುದೇ ಭಾಗದಿಂದ ಸುಲಭವಾಗಿ ಮೊಬೈಲ್ ಕರೆ ಮಾಡಬಹುದು. ಹೀಗಾಗಿ, ಸ್ಮಾರ್ಟ್‌ಫೋನ್ ಬಳಸಿ ಬಾಹ್ಯಾಕಾಶದಿಂದ ಭೂಮಿಗೆ ಕೂಡ ಕರೆ ಮಾಡಬಹುದಾಗಿದೆ.
ಈ ಉಪಗ್ರಹವು 6000 ಕೆಜಿ ತೂಕವನ್ನು ಹೊಂದಿದ್ದು, ಫುಟ್ಬಾಲ್ ಮೈದಾನದಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ಯಶಸ್ವಿಯಾದರೆ, ಇಂತಹ ಸಂಪರ್ಕವು ದುರ್ಗಮ ಪ್ರದೇಶಗಳಿಗೆ ಗುಣಮಟ್ಟದ 5ಜಿ ಸೇವೆ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಬಹುದು.
ಸಾಧನೆ
- ‘ಬ್ಲ್ಯೂ ಬರ್ಡ್’ ಎಂಬ ಉಪಗ್ರಹವನ್ನು AST ಕಂಪನಿಯು ಅಭಿವೃದ್ಧಿಪಡಿಸಿದೆ
- ಉಪಗ್ರಹದಿಂದ ನೇರವಾಗಿ ಭೂಮಿಯ ಯಾವುದೇ ಭಾಗಕ್ಕೆ ಕರೆ ಮಾಡಬಹುದು
- 5ಜಿ ಸೇವೆಗೂ ಅವಕಾಶವಿರುವ ಈ ಉಪಗ್ರಹ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಉಡಾವಣೆಗೆ ಸಜ್ಜು.