ಭಾರತದ ಬಾಹ್ಯಾಕಾಶ ಸಂಸ್ಥೆ, ISRO, ವಿಶೇಷವಾಗಿ ಸಣ್ಣ ಉಪಗ್ರಹ ರಾಕೆಟ್‌ಗಳಿಗಾಗಿ ಎರಡನೇ ಬಾಹ್ಯಾಕಾಶ ಉಡಾವಣಾ ತಾಣವನ್ನು ರಚಿಸುತ್ತಿದೆ. ಈ ಹೊಸ ಬಾಹ್ಯಾಕಾಶ ನಿಲ್ದಾಣವು ತಮಿಳುನಾಡಿನ ಕುಲಶೇಖರಪಟ್ಟಿಣಂ (Kulasekarapattinam) ನಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸಿದ್ಧಗೊಳ್ಳಲಿದೆ.
ಈ ಪ್ರದೇಶವು ಸುಮಾರು 2,000 ಎಕರೆಗಳನ್ನು ಹೊಂದಿದ್ದು, ISRO ಈ ಬಾಹ್ಯಾಕಾಶ ನಿಲ್ದಾಣವನ್ನು ಖಾಸಗಿ ಕಂಪನಿಗಳ ರಾಕೆಟ್‌ಗಳನ್ನು ಉಡಾವಣೆ ಮಾಡಲು ಮಾತ್ರ ಉಪಯೋಗಿಸಲಿದೆ. ಇಸ್ರೋ ಅದನ್ನು ತನ್ನ ಸ್ವಂತ ಕಾರ್ಯಗಳಿಗೆ ಬಳಸುವುದಿಲ್ಲ.
ಇಲ್ಲಿ ಸಣ್ಣ ಉಪಗ್ರಹ ಉಡಾವಣಾ ವಾಹನ (SSLV) ಯಂತಹ ರಾಕೆಟ್ ಗಳನ್ನು ಉಡಾವಣೆ ಮಾಡಲು ಯೋಜಿಸಲಾಗಿದೆ. ಇದು ಮೂರು ಹಂತದ ರಾಕೆಟ್ ಆಗಿದ್ದು ಸಣ್ಣ ಉಪಗ್ರಹಗಳನ್ನು (ಸುಮಾರು 500 ಕಿಲೋಗ್ರಾಂಗಳಷ್ಟು) ಬಾಹ್ಯಾಕಾಶಕ್ಕೆ ಸಾಗಿಸಬಹುದಾಗಿದೆ. ಇದರ ವಿಶೇಷತೆ ಏನೆಂದರೆ, ಈ ರಾಕೆಟ್ ತ್ವರಿತವಾಗಿ ಉಡಾವಣೆಯಾಗುತ್ತದೆ, ಬಹು ಉಪಗ್ರಹಗಳನ್ನು ಒಟ್ಟಿಗೆ ಸಾಗಿಸಬಲ್ಲದು ಮತ್ತು ಇದಕ್ಕೆ ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿಲ್ಲ.
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (IN-SPAce) ಮುಖ್ಯಸ್ಥರಾದ ಡಾ. ಪವನ್ ಗೋಯೆಂಕಾ ಅವರು ಕುಲಶೇಖರಪಟ್ಟಿಣಂನ ಬಾಹ್ಯಾಕಾಶ ನಿಲ್ದಾಣದ ಬಳಿ ಸಣ್ಣ ಬಾಹ್ಯಾಕಾಶ ಉತ್ಪಾದನಾ ಉದ್ಯಾನವನವನ್ನು ಸಹ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Follow WeGnana for more Science and Technology Updates
The post ಹೊಸ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿರುವ ISRO appeared first on WeGnana – Kannada Science and Technology News Updates.