back to top
21.4 C
Bengaluru
Saturday, August 30, 2025
HomeBusinessJapan-India: ಮೋದಿ ಭೇಟಿ ವೇಳೆ ಭಾರೀ ಹೂಡಿಕೆ ಘೋಷಣೆ

Japan-India: ಮೋದಿ ಭೇಟಿ ವೇಳೆ ಭಾರೀ ಹೂಡಿಕೆ ಘೋಷಣೆ

- Advertisement -
- Advertisement -

Tokyo: ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿಯಲ್ಲಿ ಮಹತ್ವದ ಘೋಷಣೆ ಆಗುವ ಸಾಧ್ಯತೆ ಇದೆ. ವರದಿ ಪ್ರಕಾರ, ಜಪಾನ್ ಸರ್ಕಾರ 10 ಟ್ರಿಲಿಯನ್ ಯೆನ್ (ಸುಮಾರು 68 ಬಿಲಿಯನ್ ಡಾಲರ್), ಅಂದರೆ 6 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಿದ್ಧವಾಗಿದೆ.

2022ರಲ್ಲಿ ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಭಾರತಕ್ಕೆ ಬಂದಾಗ 5 ಟ್ರಿಲಿಯನ್ ಯೆನ್ ಹೂಡಿಕೆ ಘೋಷಿಸಿದ್ದರು. ಈಗ ಅದನ್ನೇ ದ್ವಿಗುಣಗೊಳಿಸಿ 10 ಟ್ರಿಲಿಯನ್ ಯೆನ್ ಹೂಡಿಕೆ ಮಾಡುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿ ಆಗಸ್ಟ್ 29ರಂದು ಜಪಾನ್‌ಗೆ ತೆರಳಿ, ಮೂರು ದಿನಗಳ ಕಾಲ ಭಾರತ-ಜಪಾನ್ ಸಮಿಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯ ನಂತರ ಎರಡೂ ದೇಶಗಳ ಪ್ರಧಾನಿಗಳಿಂದ ಜಂಟಿ ಹೇಳಿಕೆ ಹೊರಬರುವ ಸಾಧ್ಯತೆ ಇದೆ.

ಮೋದಿ ಅವರ ಈ ಭೇಟಿಯಲ್ಲಿ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆ ಪ್ರಮುಖ ವಿಷಯವಾಗಲಿದೆ. ಜಪಾನ್ ಹೊಸ ತಲೆಮಾರಿನ ಇ10 ಸರಣಿಯ ಶಿಂಕನ್ಸೆನ್ ಟ್ರೈನ್ ಮಾದರಿಯನ್ನು ಭಾರತಕ್ಕೆ ನೀಡಲು ಸಿದ್ದವಾಗಿದೆ. ಈ ಅತಿ ವೇಗದ ರೈಲು ಭಾರತ-ಜಪಾನ್ ಸ್ನೇಹ ಬಲಪಡಿಸುವುದರ ಜೊತೆಗೆ ಎರಡೂ ದೇಶಗಳ ಪ್ರಗತಿಗೆ ದಾರಿಯಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page