ಜಪಾನ್ (Japan) ಇತ್ತೀಚೆಗೆ internet ವೇಗದಲ್ಲಿ ವಿಶ್ವದ ಅತಿದೊಡ್ಡ ದಾಖಲೆ ಸಿದ್ಧಪಡಿಸಿದೆ. ದೇಶದ ಸಂಶೋಧಕರು 1.02 ಪೆಟಾಬಿಟ್ ಪರ್ ಸೆಕೆಂಡ್ (Pbps) ವೇಗದ internet ರಚಿಸಲು ಯಶಸ್ವಿಯಾದರು. ಇದು ಭಾರತದ ಸರಾಸರಿ ವೇಗವಾದ 63.55 Mbpsಗಿಂತ 1.6 ಕೋಟಿ ಪಟ್ಟು ವೇಗ! ಅಮೆರಿಕದ ಸರಾಸರಿ 290 Mbps ವೇಗಕ್ಕಿಂತಲೂ 35 ಲಕ್ಷ ಪಟ್ಟು ವೇಗವಾಗಿದೆ.
ಈ ಸಾಧನೆಗಾಗಿ ಜಪಾನ್‌ನ NICT ಸಂಸ್ಥೆ, ಸುಮಿಟೊಮೊ ಎಲೆಕ್ಟ್ರಿಕ್ ಮತ್ತು ಯುರೋಪಿಯನ್ ವಿಜ್ಞಾನಿಗಳು ಒಟ್ಟಾಗಿ 19-ಕೋರ್ ಆಪ್ಟಿಕಲ್ ಫೈಬರ್ ಕೇಬಲ್ ಬಳಸಿದ್ದು, 1,808 ಕಿಲೋಮೀಟರ್ ದೂರವರೆಗೆ ಡೇಟಾ ರವಾನಿಸಲಾಗಿದೆ. ಈ ದೂರ ಲಂಡನ್ನಿಂದ ರೋಮ್‌ವರೆಗಿನದ್ದನ್ನು ಸಮಾನಿಸುತ್ತದೆ.
ಇಂತಹ ವೇಗದಲ್ಲಿ, ಒಂದು ಸೆಕೆಂಡಿನಲ್ಲೇ ಸಂಪೂರ್ಣ ನೆಟ್ಫ್ಲಿಕ್ಸ್ ಲೈಬ್ರರಿಯನ್ನೋ ಅಥವಾ 10,000 4K ಚಿತ್ರಗಳನ್ನೋ download ಮಾಡಬಹುದು. ಉದಾಹರಣೆಗೆ, 150GB ಗೇಮ್ ‘Call of Duty: Warzone’ ಕಣ್ಣು ಮಿಟುಕಿಸುವೊಳಗೆ download ಆಗಬಹುದು.
ಇದು ಭವಿಷ್ಯದ 6G network, ಕ್ಲೌಡ್ ಕಂಪ್ಯೂಟಿಂಗ್, ಟೆಲಿಮೆಡಿಸಿನ್ ಮತ್ತು ವರ್ಚುವಲ್ ರಿಯಾಲಿಟಿ ಕ್ಷೇತ್ರಗಳಲ್ಲಿ ಕ್ರಾಂತಿ ತರಲಿದೆ. ಆದರೆ ಸದ್ಯಕ್ಕೆ ಇದು ಪ್ರಯೋಗಾಲಯ ಮಟ್ಟದಲ್ಲಿ ಮಾತ್ರ ಲಭ್ಯವಿದೆ.
ಭಾರತ 63.55 Mbps ಸರಾಸರಿ ಬ್ರಾಡ್ಬ್ಯಾಂಡ್ ವೇಗದೊಂದಿಗೆ ಜಾಗತಿಕವಾಗಿ 92ನೇ ಸ್ಥಾನದಲ್ಲಿದೆ. ಆದರೆ ಮೊಬೈಲ್ internet ನತ್ತ ಗಮನ ಹರಿಸಿ, 2023ರಲ್ಲಿ ಭಾರತ 47ನೇ ಸ್ಥಾನಕ್ಕೆ ತಲುಪಿದೆ — ಇದು ಜಪಾನ್ (58ನೇ) ಮತ್ತು ಯುಕೆ (62ನೇ)ಗಿಂತ ಉತ್ತಮವಾಗಿದೆ.
ಇಂಟರ್ನೆಟ್ ವೇಗದಲ್ಲಿ ಮುಂಚೂಣಿಯಲ್ಲಿರುವ ದೇಶಗಳು (2025)
- ಸಿಂಗಾಪುರ – 368.50 Mbps
- ಯುಎಇ – 291.85 Mbps
- ಹಾಂಗ್ ಕಾಂಗ್ – 277.26 Mbps
- ಚಿಲಿ – 263.89 Mbps
- ಡೆನ್ಮಾರ್ಕ್ – 259.41 Mbps
5G ವಿಸ್ತರಣೆ, ಫೈಬರ್ ಆಪ್ಟಿಕ್ ಹೂಡಿಕೆ ಮತ್ತು ಡೇಟಾ ಸೆಂಟರ್ ಅಭಿವೃದ್ಧಿಯಿಂದ ಭಾರತ ತನ್ನ ಇಂಟರ್ನೆಟ್ ವೇಗ ಸುಧಾರಿಸಬಹುದು. ಜಪಾನ್‌ನ ಈ ಸಾಧನೆ ಇಡೀ ಜಗತ್ತಿಗೆ ಪ್ರೇರಣೆಯಾಗಿದೆ.