Mumbai: ಆಸ್ಟ್ರೇಲಿಯಾದಲ್ಲಿ ತಮ್ಮ ಚಾಣಾಕ್ಷ ಬೌಲಿಂಗ್ ಮೂಲಕ ವಿಕೆಟ್ ಗಳನ್ನು ಕಬಳಿಸುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಈ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ.
ಬುಮ್ರಾ ಪ್ರತಿ ಪಂದ್ಯದಲ್ಲಿ ತಮ್ಮ ಬೌಲಿಂಗ್‌ನಿಂದ ಹೊಸ ಮಟ್ಟವನ್ನು ತಲುಪಿದ್ದಾರೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್ ಮತ್ತು ಈಗ ಮೆಲ್ಬೋರ್ನ್ನಲ್ಲಿ ಬುಮ್ರಾ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ಬುಮ್ರಾ ಅವರ ಅಪಾರ ಪ್ರದರ್ಶನ ಟೀಂ ಇಂಡಿಯಾವನ್ನು ಸೋಲಿನಿಂದ ರಕ್ಷಿಸಲು ಸಾಕಾಗದಿದ್ದರೂ, ಅವರು ತಮ್ಮ ಶ್ರೇಷ್ಠ ಆಟದಿಂದ ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬುಮ್ರಾ ಅವರ ಅದ್ಭುತ ಸಾಧನೆಗೆ ಐಸಿಸಿ ಅವರು ಎರಡು ಪ್ರಮುಖ ಪ್ರಶಸ್ತಿಗಳಾದ “ವರ್ಷದ ಅತ್ಯುತ್ತಮ ಕ್ರಿಕೆಟಿಗ” ಮತ್ತು “ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ” ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಿದ್ದಾರೆ. ಬುಮ್ರಾ ಅವರ ಸಾಧನೆ ಪ್ರತಿ ಭಾರತೀಯ ಕ್ರಿಕೆಟ್ ಪ್ರೇಮಿಗೆ ಹೆಮ್ಮೆಯ ವಿಷಯವಾಗಿದೆ.